Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ನಮ್ಮ “ಪರಂಪರೆ”

“ನಮ್ಮ ಪರಂಪರೆ”……………………. ಭಾರತ ದೇಶ ಸರ್ವರೀತಿಯಿಂದಲೂ ಸಂಪತ್ಭರಿತ ದೇಶವೆಂದು ಹೇಳಿದರೆ ಅತಿಶಯೋಕ್ತಿ ಅನ್ನಿಸಲಾರದು. ನಮ್ಮಲ್ಲಿ ಎಲ್ಲ ರೀತಿಯ ವೈದ್ಯಕೀಯ ಉಪಚಾರ, ಚಿಕಿತ್ಸೆ ಶಸ್ತ್ರಚಿಕಿತ್ಸೆಗಳು ಲಭಿಸುತ್ತದೆ. ಕೆಲವೊಂದು ಬಾರಿ ಇದಕ್ಕೂ ಮೀರಿದಂತಹ ಸಂದರ್ಭಗಳು ಬಂದೊದಗಿದಾಗ ನಮ್ಮ ಹಿರಿಯ ತಲೆಮಾರಿನ ಅಜ್ಜಿಯ ಉಪಾಯ, ಉಪಚಾರಗಳು ನೆನಪಿಗೆ ಬರುತ್ತವೆ. ಮದುವೆ ಕಾರ್ಯಕ್ರಮದಲ್ಲಿ ಎಲ್ಲರ ಜೊತೆಗೆ ಕುಳಿತು ಊಟ ಮಾಡುವಾಗ, ಕಾಲ್ಥುಳಿಯಾಗಿ,ಒಳ್ಳೆಯ ಉಡುಗೆ ತೊಡುಗೆ ಮಾಡಿಕೊಂಡಾಗ, ಹೊಸ ಜಾಗಕ್ಕೆ ಹೋಗಿ ಬಂದಾಗ, ಕೆಲವೊಂದು ವ್ಯಕ್ತಿಗಳ ಭಯಾನಕ ಕೆಟ್ಟ ದೃಷ್ಠಿ ಬಿದ್ದಾಗ ದೃಷ್ಟಿದೋಷವಾಗಿ ಚಿಕ್ಕಮಕ್ಕಳ […]

“ನಮ್ಮ ಪರಂಪರೆ”…………………….

ಭಾರತ ದೇಶ ಸರ್ವರೀತಿಯಿಂದಲೂ ಸಂಪತ್ಭರಿತ ದೇಶವೆಂದು ಹೇಳಿದರೆ ಅತಿಶಯೋಕ್ತಿ ಅನ್ನಿಸಲಾರದು.

ನಮ್ಮಲ್ಲಿ ಎಲ್ಲ ರೀತಿಯ ವೈದ್ಯಕೀಯ ಉಪಚಾರ, ಚಿಕಿತ್ಸೆ ಶಸ್ತ್ರಚಿಕಿತ್ಸೆಗಳು ಲಭಿಸುತ್ತದೆ. ಕೆಲವೊಂದು ಬಾರಿ ಇದಕ್ಕೂ ಮೀರಿದಂತಹ ಸಂದರ್ಭಗಳು ಬಂದೊದಗಿದಾಗ ನಮ್ಮ ಹಿರಿಯ ತಲೆಮಾರಿನ ಅಜ್ಜಿಯ ಉಪಾಯ, ಉಪಚಾರಗಳು ನೆನಪಿಗೆ ಬರುತ್ತವೆ.

ಮದುವೆ ಕಾರ್ಯಕ್ರಮದಲ್ಲಿ ಎಲ್ಲರ ಜೊತೆಗೆ ಕುಳಿತು ಊಟ ಮಾಡುವಾಗ, ಕಾಲ್ಥುಳಿಯಾಗಿ,ಒಳ್ಳೆಯ ಉಡುಗೆ ತೊಡುಗೆ ಮಾಡಿಕೊಂಡಾಗ, ಹೊಸ ಜಾಗಕ್ಕೆ ಹೋಗಿ ಬಂದಾಗ, ಕೆಲವೊಂದು ವ್ಯಕ್ತಿಗಳ ಭಯಾನಕ ಕೆಟ್ಟ ದೃಷ್ಠಿ ಬಿದ್ದಾಗ ದೃಷ್ಟಿದೋಷವಾಗಿ ಚಿಕ್ಕಮಕ್ಕಳ ಮೇಲೆ ಪ್ರೌಢವಸ್ಥೆಗೆ ಬಂದವರಿಗೆ, ವಿಶೇಷವಾಗಿ ಹೆಣ್ಣು ಮಕ್ಕಳ ಮೇಲೆ ಪರಿಣಾಮ ಉಂಟು ಮಾಡುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಜರ್ಜರಿರಾಗುವದು, ಸೊರಗಿ ಸಣಕಲಾಗುವುದು. ಊಟ ಸೇರದೇ ಇರುವುದು ಹೀಗೆ ಹಲವಾರು ರೀತಿಯಿಂದ ಪರಿಣಾಮ ಬೀರಿದಾಗ ವೈದ್ಯರಿಂದ ಉಪಚಾರ ಸಿಗದೇ ಮನೆಯಲ್ಲಿ ಹಳೆಯ ತಲೆಮಾರಿನ ಅಜ್ಜಿಯರು ಕಂಡುಕೊಂಡಂತಹ ಉಪಚಾರವೆಂದರೆ ಪೀಡಿತರಾದವರಿಗೆ ಎದುರಿಗೆ ಕುಳ್ಳಿರಿಸಿಕೊಂಡು ದೃಷ್ಟಿ ತಗೆಯುವ ವಿಧಾನವನ್ನು ಅನುಸರಿಸುತ್ತಾರೆ. ಅದೇನೆಂದರೆ_
ಮಕ್ಕಳ ತಿನಿಸು, ಕಸಬರಿಗೆಯ ಕಡ್ಡಿ, ಮೂರು ಹಾಡಿ ಮಣ್ಣು ಇವೆಲ್ಲವೂ ಪಾತ್ರೆಯಲ್ಲಿ ಹಾಕಿ ಪಾತ್ರೆಯ ಒಳಗೆ ಕಾಗದಕ್ಕೆ ಬೆಂಕಿ ತಗುಲಿಸಿ ಮುಖದ ಮೇಲಿ೦ದ ಮೂರು ಬಾರಿ ಮೇಲಿಂದ ಪಾದದವರೆಗೂ ಇಳುವಿ ತಾಟಿನ ತುಂಬ ನೀರು ತುಂಬಿದ ಪಾತ್ರೆಗೆ ಬೊರಲು ಹಾಕಿದಾಗ ಆ ನೀರು ಗಡಗಡ ಸದ್ದು ಮಾಡುತ್ತಾ ಪಾತ್ರೆಯೊಳಗೆ ನುಗ್ಗಿ ತಾಟಿನಲ್ಲಿನ ನೀರೆಲ್ಲ ಖಾಲಿಯಾಯಿತು ಎಂದರೆ ಆದಂತಹ ದೃಷ್ಟಿದೋಷ ದೂರಾಯಿತು ಎಂಬ ನಂಬುಗೆ ಬರುತ್ತಿತ್ತು. ಅವರ ದೋಷ ಪರಿಹಾರವಾಗಿ ಬಿಡುತ್ತಿತ್ತು. ಕಾಡಿಗೆ ಹೆಚ್ಚುವ ಮೂಲಕ ದೃಷ್ಟಿದೋಷ ನಿವಾರಣೆ ಮಾಡುತ್ತಿದ್ದರು.

ರಚನೆ- ಹೆಚ್ ಆರ್ ಬಾಗವಾನ
ಮುದ್ದೇಬಿಹಾಳ

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.