Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಮುಕ್ತಿ ಪಡೆಯುವುದು ಹೇಗೆ
- ಕ್ರೀಡೆ | ಆಧ್ಯಾತ್ಮ | ರಾಜಕೀಯ

ಮುಕ್ತಿ ಪಡೆಯುವುದು ಹೇಗೆ

ಪಾಪನುಗುಣದಿಂದೆ ಗಿಡಮರ ಕ್ರಿಮಿಗಳರೂಪಾಗಿ ಕೀಟ ಪತಂಗದಿಯಾಗಿ IIಆ ಪಕ್ಷಿ ಕುಲವಾಗಿ ಮೃಗ ಜಾತಿಯಾಗಿ ಮೇಲಾ ಪಶು ರೂಪಾಗಿ ಬಹುಭಾ ಧೆಗಲಸಿ II ಅನಂತ ಪಾಪಗಳಿಂದ ಕರ್ಮ ಮಾಡಿ ಮೊದಲು ಎಲ್ಲಿ ಹೋಗ್ಯಾದ ? ಆಕಾಶಕ್ಕೆ ಹೋಗ್ಯಾದ. ಅಲ್ಲಿ ಪಾಪ ಪುಣ್ಯದ ಅನುಸಾರವಾಗಿ ಕೈಲಾಸದಲ್ಲಿ ಇಟ್ಟುಕೊಂಡಾರ . ಪುಣ್ಯ ಮಾಡಿದರ ಅಲ್ಲಿ ದೇವತೆಗಳ ಪೂಜೆ ಮಾಡ್ತಾರ. ಪಾಪ ಮಾಡಿದರ ಯಮನ ಹತ್ತಿರ ಕಳಿಸುತ್ತಾರೆ. ಅಲ್ಲಿ ಅವ ಶಿಕ್ಷ ಕೊಡ್ತಾನ. ಆ ಪುಣ್ಯ ಪಾಪ ಅಲ್ಲಿ ನಾಶ ಆಯಿತು ಅಂದ್ರ […]

  • ಮನುಷ್ಯ ಯಾಕ ಹುಟ್ಟಿದ ?
  • ಏನು ಸಾಧನೆ ಮಾಡಬೇಕು ?
  • ಮುಕ್ತಿ ಹೇಗೆ ಪಡೆಯಬೇಕು ? ಯಾಕ ಹುಟ್ಟಿದ ಅಂದ್ರೆ ಅದು ಹಿಂದಿನ ಕರ್ಮ. ಮನುಷ್ಯ ಹಿಂದ ಅನೇಕ ಕರ್ಮಗಳನ್ನ ಮಾಡ್ಯಾನ,

ಪಾಪನುಗುಣದಿಂದೆ ಗಿಡಮರ ಕ್ರಿಮಿಗಳ
ರೂಪಾಗಿ ಕೀಟ ಪತಂಗದಿಯಾಗಿ II
ಆ ಪಕ್ಷಿ ಕುಲವಾಗಿ ಮೃಗ ಜಾತಿಯಾಗಿ ಮೇ
ಲಾ ಪಶು ರೂಪಾಗಿ ಬಹುಭಾ ಧೆಗಲಸಿ II

  ಅನಂತ ಪಾಪಗಳಿಂದ ಕರ್ಮ ಮಾಡಿ ಮೊದಲು ಎಲ್ಲಿ ಹೋಗ್ಯಾದ ? ಆಕಾಶಕ್ಕೆ 

ಹೋಗ್ಯಾದ. ಅಲ್ಲಿ ಪಾಪ ಪುಣ್ಯದ ಅನುಸಾರವಾಗಿ ಕೈಲಾಸದಲ್ಲಿ ಇಟ್ಟುಕೊಂಡಾರ . ಪುಣ್ಯ ಮಾಡಿದರ ಅಲ್ಲಿ ದೇವತೆಗಳ ಪೂಜೆ ಮಾಡ್ತಾರ. ಪಾಪ ಮಾಡಿದರ ಯಮನ ಹತ್ತಿರ ಕಳಿಸುತ್ತಾರೆ. ಅಲ್ಲಿ ಅವ ಶಿಕ್ಷ ಕೊಡ್ತಾನ. ಆ ಪುಣ್ಯ ಪಾಪ ಅಲ್ಲಿ ನಾಶ ಆಯಿತು ಅಂದ್ರ ಅರ್ಧ ಅವನ ಗಂಟು ಕಟ್ಟಿ ಆಕಾಶಕ ಒಗೀತಾನ. ಆಕಾಶ ಎಲ್ಲಿಗೆ ತಂದು ಒಗೀತದ ಅಂದ್ರ ಸೂರ್ಯಮಂಡಲಕ್ಕೆ ತಂದು ಒಗೀತದ. ಸೂರ್ಯ ತಂದು ಎಲ್ಲಿ ಒಗೀತಾನ ಅಂದ್ರೆ ವಾಯುಮಂಡಲಕ ತಂದು ಒಗೀತಾನ. ವಾಯು ತಂದು ಮೇಘಮಂಡಲಕ್ಕ ಒಗೀತದ ಮೇಘಮಂಡಲ ಭೂಮಂಡಲಕ್ಕೆ ತಂದು ಒಗೀತದ.

ಅಂಡಜ – 21 ಲಕ್ಷ
ಜರಾಯುಜ – 21 ಲಕ್ಷ
ಶ್ವೇದಜ – 21 ಲಕ್ಷ
ಉದ್ಬೀಜ – 21 ಲಕ್ಷ
ಒಟ್ಟು = 84 ಲಕ್ಷ

ಈ ಭೂಮಿಯೊಳಗೆ ಹುಲ್ಲು ಕಡ್ಡಿ ಗಿಡಗಂಟಿ ಉದ್ವಿಜ 21 ಲಕ್ಷ.

ಭೂಮಿಯೊಳಗೆ ಹುಟ್ಟು ತಕ್ಕಂತಹದ್ದು, ಅಲ್ಲಿಂದ ಜರಾಯುಜ 21 ಲಕ್ಷ ನೀರೊಳಗೆ ಹುಟ್ಟ ತಕ್ಕಂತಹದ್ದು, ಖಂಡದ 21 ಲಕ್ಷ ಕೋಳಿ, ನವಿಲು , ಕಾಗೆ , ಗುಬ್ಬಿ. ಜರಾಯುಜ 21 ಲಕ್ಷ ಗರ್ಭಕೋಶದೊಳಗ.ಅದು ಜರಾಯು ಚೀಲದ್ದು ಅದರೊಳಗೆ 21 ಲಕ್ಷ ನಾಯಿ, ನರಿ, ಕತ್ತೆ, ಚಿಗರಿ, ಮನುಷ್ಯ ಇವೆಲ್ಲ ಗರ್ಭದಿಂದ ಹುಟ್ಟುತ್ತವೆ.

  ಅದರೊಳಗೆ ಪುಣ್ಯಕ್ಕೆ ಅನುಸಾರವಾಗಿ ಮಾನವನಾಗಿ ಹುಟ್ಟಿ ಬರ್ತಾನ.ಮನುಷ್ಯ ಆಗಬೇಕಾದರ ಪಾಪ ಹೆಚ್ಚಾದ್ರೂ ಮನುಷ್ಯ ಆಗೋದಿಲ್ಲ. ಪುಣ್ಯ ಹೆಚ್ಚಾದರೂ ಮನುಷ್ಯ ಆಗುವುದಿಲ್ಲ. ಪಾಪ ಹೆಚ್ಚಾದರೆ ಪಶು ಪಕ್ಷಿಗಳ ಜನ್ಮ ಬರ್ತದ. ಪುಣ್ಯ ಹೆಚ್ಚಾದರೆ ದೇವತೆಗಳ ಜನ್ಮ ಬರ್ತದ. ಮತ್ತು ದೇವತೆಗಳಿಗೂ ಮೋಕ್ಷವಿಲ್ಲ. ಅಂದ್ರೆ ಅವರಿಗೆ ಬಿಡುವಿಲ್ಲ. ಅವರಿಗೆ ಒಂದೇ ಅವಸ್ಥೆ ಜಾಗ್ರ. ಯಾವಾಗಲೂ ಜಾಗ್ರ, ಅವರಿಗೆ ನಿದ್ದೆ ಇಲ್ಲ, ಸ್ವಪ್ನ ಇಲ್ಲ , ಅವರಿಗೆ ಬಿಡುವೆ ಇಲ್ಲ.

  ಸೂರ್ಯ ತಿರುಗಲೇಬೇಕು ಚಂದ್ರ ತಿರುಗಲೇ ಬೇಕು. ಗಾಳಿ ಬೀಸಲೇಬೇಕು. ಇವರಿಗೆ ಬಿಡುವೇ ಇಲ್ಲ ಅಂದ್ರ ಮ್ಯಾಗ್ ಮುಕ್ತಿ ಇಲ್ಲ. ಮತ್ತ ಈ ಪಶು ಪಕ್ಷಿಗಳಿಗೂ ಮುಖ್ಯ ಇಲ್ಲ ಅವುಗಳಿಗೆ ಅರಿವಿಲ್ಲ. ಅವರಿಗೆ ಸಾಮಾನ್ಯ ಜ್ಞಾನ ಆದ, ಆದರೆ ವಿಶೇಷ ಜ್ಞಾನವಿಲ್ಲ. ಸಾಮಾನ್ಯ ಜ್ಞಾನ ಅಂದ್ರೆ ಹಾರಾಡತಾವು, ತಿಂತಾವು , ಉಣತಾವು, ಮಕ್ಕಳಿಗೆ ಜನ್ಮ ನೀಡುತ್ತವೆ ಅಷ್ಟೇ. ಅವುಕ ಮೂರು ಅವಸ್ಥೆ ಇಲ್ಲ. ಜಾಗ್ರ, ಸ್ವಪ್ನ , ಸುಸುಪ್ತಿ ಇಲ್ಲ. ಮನುಷ್ಯನಿಗೆ ಜಾಗ್ರ ಸ್ವಪ್ನ ಸುಷುಪ್ತಿ ಈ ಮೂರು ಅವಸ್ಥೆಗಳು ಅದಾವು.ಮನುಷ್ಯ ಆಗಬೇಕಾದರೆ ಪಾಪ ಪುಣ್ಯ ಎರಡು ಸಮನಾಗಿ ನಿಂತಾಗ ಅಂದ್ರೆ ತೂಗಿ ಕಾಟ ಮಾಡಿದಾಗ ಮನುಷ್ಯ ಆಗ್ಯಾನ . ಮನುಷ್ಯ ಆದ್ಮೇಲೆ ಅವಾ ತಿಳ್ಕೊಂಡ್ರೆ ಮನುಷ್ಯ,ಮನುಷ್ಯನಾಗಿ ಹಂಗ ಅರಿವಿಲ್ಲದಂತೆ ದನದ ತರಹ ಬಾಳುವೆ ಮಾಡಿಕೊಂಡು ಹೋದರ ಅದು ಮನುಷ್ಯ ಅಲ್ಲ . ಅದನ್ನು ನೋಡಿದರ ದನಾನೇ ಬೇಸಿ, ಇದು ಅದಕ್ಕಿಂತಲೂ ಕಡಿ .

ಮುಂದುವರೆಯುತ್ತದೆ …..

ನಾಳಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.