Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಕಿರಿಯ ಮಗ ಪರುಶರಾಮ

ಪರ ಊರಾಗ ಮೊದಲಿಗೆ ನಿಂತು ಹಾಡ್ಬೇಕಲ್ರಿ ಅವಂಗ ಬೆವರು ಬಂದು ನೀರು ಸುರಿಯಾಕತ್ತಿತ್ತು. ಅದನ್ನು ನೋಡಿ ನಮ್ಮ ಊರವ ನಿಂತಿದ್ದ ಅವ್ವಾ ಹೇ ಬಸಪ್ಪ ನಾ ಹಾಡಕ್ಕ ನಿಂತಿನ್ರಿ. ನಾವು ಹೋದ ಗಳಿಗೆ ಮಣ್ಣೂರು ಸಾಹೇಬ ಅಂತ ಹೇಳಿ ಮುಸ್ಲಿಮರ ಪೈಕಿ ನಮ್ಮ ಊರ ಹೆಣ್ಣು ಮಗಳ ಮದುವೆ ಮಾಡಿಕೊಂಡವರು. ಅವರು ಪಾರಿಜಾತ ಆಡೋರು, ಕುಸ್ತಿನು ಮಾಡೋರು, ಗುಂಡು ಎತ್ತವರು, ಕಲ್ಲು ಎತ್ತವರು, ಭಜನಾನು ಮಾಡೋರು, ಹಂಗ ತೊಡಿ ಚಪ್ಪರಿಸಿ ಚಪ್ಪರಿಸಿ ಮಾತು ಹೇಳೋರು. ಭಾರಿ ಬಂದುಬಸ್ತ […]

ಪರ ಊರಾಗ ಮೊದಲಿಗೆ ನಿಂತು ಹಾಡ್ಬೇಕಲ್ರಿ ಅವಂಗ ಬೆವರು ಬಂದು ನೀರು ಸುರಿಯಾಕತ್ತಿತ್ತು. ಅದನ್ನು ನೋಡಿ ನಮ್ಮ ಊರವ ನಿಂತಿದ್ದ ಅವ್ವಾ ಹೇ ಬಸಪ್ಪ ನಾ ಹಾಡಕ್ಕ ನಿಂತಿನ್ರಿ. ನಾವು ಹೋದ ಗಳಿಗೆ ಮಣ್ಣೂರು ಸಾಹೇಬ ಅಂತ ಹೇಳಿ ಮುಸ್ಲಿಮರ ಪೈಕಿ ನಮ್ಮ ಊರ ಹೆಣ್ಣು ಮಗಳ ಮದುವೆ ಮಾಡಿಕೊಂಡವರು. ಅವರು ಪಾರಿಜಾತ ಆಡೋರು, ಕುಸ್ತಿನು ಮಾಡೋರು, ಗುಂಡು ಎತ್ತವರು, ಕಲ್ಲು ಎತ್ತವರು, ಭಜನಾನು ಮಾಡೋರು, ಹಂಗ ತೊಡಿ ಚಪ್ಪರಿಸಿ ಚಪ್ಪರಿಸಿ ಮಾತು ಹೇಳೋರು. ಭಾರಿ ಬಂದುಬಸ್ತ ಒಟ್ಟಿಗೆ ಅವರಿಗೆ ಭೇದಭಾವ ಇದ್ದಿದ್ದಿಲ್ಲ. ಅಲ್ಲಿಗೆ ಅವರು ಬರುತ್ತಿದ್ದರು. ನಾ ಹಾಡುದು ನೋಡಿ ಈ ಸಾರಿ ಕಡೆ ಹಳ್ಳೂರಿಗೆ ಹೋಯಿತು ನೋಡು ಅಂದರು.

ನಾನು ನಿಜಗುಣರ ಪದ ಹಾಡಲಿಕ್ಕೆ ಹತ್ತಿದ್ದೀರಿ ಆ ಊರಿಗೆ ಒಬ್ಬ ಸ್ವಾಮಿ, ಆವಾಗ ನಾ ಹ್ಯಾಂಗ್ ಅಂದ್ರೆ ಸಣ್ಣ ವಯಸ್ಸಿನವ ಇದ್ದೆ. ಆ ಸ್ವಾಮಿಗೆ ವಯಸ್ಸಾಗಿತ್ತು. ಮೊಮ್ಮಗನ ಕರ್ಕೊಂಡು ರಾತ್ರಿ ಬಾರ ಆಗಿತ್ತುರಿ ಅಲ್ಲಿಗೆ ಬಂದು ಬಿಟ್ಟ .

ಹೇ ಸ್ವಾಮಿಗಳು ಬಂದ್ರು ಸ್ವಾಮಿಗಳು ಬಂದ್ರ ಅಂತ ಎಲ್ಲರೂ ಅವರನ್ನು ಕರ್ಕೊಂಡು ಬಂದು ಕುರ್ಚಿ ಹಾಕಿ ಕುಂದುರಿಸಿ ಬಿಟ್ಟರು. ಯಾಳವಾರ ಎಲ್ಲಪ್ಪ ಮಹಾರಾಜ ಅಂತ ಹೇಳಿ ಆತ ಸಾಧು ಮತ್ತು ನಿರೀಕ್ಷರಿಗಳು. ಭಯಂಕರ ದುಡಿದಾವ ಮ ಹಾಡುವಾಗ ತಾಳ ಹಾಕೊಂತ ಇಲ್ಲಿಂದ ಅಲ್ಲಿ ತನಕ ಓಡಿ ಹೋಗಾಂವಾ ಅಲ್ಲಿಂದ ಇಲೀ ತಕ ಓಡಿ ಬರಾವಾ.ನಾ ಪದ ಹಾಡಿ ಮುಗಿಸಿದೆ. ಎಲ್ಲಪ್ಪ ಮಹಾರಾಜರು ಲೆಕ್ಚರ್ ಕೊಟ್ರು.

ಈಗ ಹಾಡಿದರಲ್ಲ ಅವರು ಯಾವೂರ ಅವರು ? ಅಂತ ಕೇಳಿದರು.

ಹಳ್ಳೂರವರು ….
,
ಇನ್ನೊಂದು ಪದ ಅವರು ಹಾಡಲಿ ಅವರ ಪದ ಕೇಳಿ ಬಂದೆ ಅಂದ್ರು. ಅವರು ಹೇಳಿದ್ರು ಅಂತ ನಾ ಪದ ಹಾಡಿ ಬಿಡಿಸಿ ಹೇಳಿದೆ.

ಏನ ಹರಕತ್ತ ಇಲ್ಲಪ್ಪ ಅಂದ್ರು . ನನ್ನ ಹಾಡು ಮುಗಿದ ಮೇಲೆ ಹೋಗಿ ಬಿಟ್ರು. ಮುತ್ಯಾರು ಎಲ್ಲಿಗೂ ಹೋಗಲಾರದವರು ಅಂತ ಹೇಳಿದರು. ಅದರ ಬೆಲೆನೇ ಹಂಗ ಐತಪ್ಪನ ತತ್ವಜ್ಞಾನಕ ಬೆಲೆ ಹಂಗಾದ. ಅದು ಗಟ್ಟಿ ಬಂಗಾರ, ಅದಕ್ಕ ಪರಬೊಮ್ಮ ದರಿವಿನಿಂದುರೆ ಜಾಣ್ಮೆ ಉಂಟೇ ? ಅಂತ ಹೇಳ್ಳಾರ ಶರಣ ನಿಜಗುಣರು . ಪರಬ್ರಹ್ಮದ ಜ್ಞಾನದ ಮುಂದ ಇನ್ನೊಂದು ಜಾಣತನ ಯಾವುದೂ ಅಲ್ಲ. ಅದಕ್ಕೆ ಪರಬ್ರಹ್ಮ ಜ್ಞಾನವೇ ಶ್ರೇಷ್ಠ ಜ್ಞಾನ ಅಂತ ಹೇಳ್ಯಾರ. ಅದರಾಗ ಇವು ನಿಜಗುಣರ ಶಾಸ್ತ್ರಗಳು • ಬೇರೆ ಯಾವುದಾದರೂ ತಿಳಿತಾವು, ಆದ್ರ ಇವು ಸ್ವಲ್ಪ ಕಷ್ಟ ಆಗ್ತವು.

ಅಪ್ಪಾಜಿ ಅಂದ್ರೆ ಅವರ ಮಗ ಪರಶುರಾಮ ಅವರನ್ನು ಕುರಿತು ಹೀಗೆ ಹೇಳುತ್ತಾರೆ –

ಕಿರಿಯ ಮಗ ಪರಶುರಾಮ ನ ಕುರಿತು ಹೇಳುವಾಗ – ಇಂವಾ ಸಣ್ಣವಿದ್ದಾಗ ಯಾವತ್ತೂ ನಮ್ಮ ತೊಡಿ ಮ್ಯಾಗ ಕುಂದ್ರಾವ, ಮಲಗಾವ . ನಾನು ಶಂಕರಾದೂತ ಶರಣರ ಭೇಟಿಗೆ ಹೋಗಾ0ವ ನನ್ನ ಕೂಡ ಇವನು ಓಡೋಡಿ ಬಂದ ಬಿಡಾವಾ. ಅಲ್ಲಿ ಹೋಗಿಂದ ಶರಣರಿಗೆ ನಾ ನಮಸ್ಕಾರ ಮಾಡುತ್ತಿದ್ದೆ. ಅದನ್ನು ನೋಡಿ ಅವನು ನಮಸ್ಕಾರ ಮಾಡವ . ಇವನನ್ನು ನೋಡಿ ಗುರುಗಳು ಸಿದ್ಧಾರೂಢಪ್ಪ ನೀನು ಸಿದ್ಧಾರೂಢ ಅನ್ನುವರು. ಇವನನ್ನ ಹೊತ್ತಿಕೊಂಡು ನಮಸ್ಕಾರ ಮಾಡುವವರು.

ಗುಡಿಯಾಗ ಶಾಸ್ತ್ರ ನಡೆಯೋದು. ಇವ ಅಪ್ಪಾಜಿ ಸಣ್ಣವಿದ್ದ .ಅಲ್ಲೇ ಒಂದು ಪೇಪರ್ ಬಿದ್ದಿತ್ತು. ಅವಾಗಿ0ವಾ ಶಾಲೆಗೂ ಹೋಗಿಲ್ಲ .ಏನೂ ಗೊತ್ತಿಲ್ಲ. ಅದನ್ನು ನೋಡಿದ ಗುರುಗಳು –

ಹೇ ಬಸಣ್ಣ …ಏನು ಓದುತ್ತಾನ ಅಪ್ಪಾಜಿ ಅಂತ ಕರೆದು ಕೇಳಿದರು. ಆತ ಪೇಪರ್ನಾಗಿಂದು ಓದಿ ಹೇಳಿದ. ಅದಕ್ಕೆ ಗುರುಗಳು ಅಂದ್ರು –

ಹೇ ಬಸಣ್ಣ … ಇವನ ಸಾಲಿ ಹಿಂದಿನ ಜನ್ಮದಾಗ ಆಗ್ಯಾದ. ಬ್ರಹ್ಮ ಜ್ಞಾನಿ ಅಪಾ ಇಂವಾ ಅಂದ್ರು.

ನಮ್ಮೂರ ಮಠದಾಗ ದೇವಿ ಪುರಾಣ ಹೇಳುತ್ತಿದ್ದರಿ ಅಪ್ಪಾಜಿ. ಅವಾಗ ನನಗೆ ಹೇಳ ಅಂದ್ರು ಅಮ್ಮವರು. ನಾನು ಅಮ್ಮ ಅವರ ಮಠದಾಗ ಹೇಳ್ತೀನಿ ಅಂತ ವಚನ ಕೊಟ್ಟಿದ್ದೆ ನನಗಾಗುವುದಿಲ್ಲಂತ ಹೇಳಿದ್ದೆ ಅದಕ್ಕೆ ಅವರು – ನಿಮ್ಮ ಅಪ್ಪಾಜಿಗಾರ ಹೇಳಿ ಕಳಿಸಿರಿ ಪುರಾಣ ಹೇಳಕ್ಕ ಅಂದ್ರು.

ಯಾರು ಬ್ಯಾಡ ಅಂತಾರಪ್ಪ ಕರ್ಕೊಂಡು ಹೋಗ್ರಿ ಅಂತ ನಾನು ಅಂದೆ. ಅವಾಗ ಇವ ಎಂಜಿಬಿಸಿ ಕಾಲೇಜಿನಾಗ ಬಿಎ ಓದ್ತಿದ್ದಪ್ಪ, ಇವಂಗ ಕೇಳಾನ – ನಾನು ಹೋಗಲಪ್ಪ ಅಂದ.
ಅದಕ್ಕೆ ನಾನು ಹೋಗಪ ಹ್ಯಾಂಗೋ ಕರಿಯಾಕ ಹತ್ಯಾರ ಅಂದೆ.

ನನ್ನ ಕೂಡ ಬರುವಾಗ ಗುಡಿಯಾಗ ದೇವಿ ಪುರಾಣ ಓದುತ್ತಿದ್ದ ಅದನ್ನು ನಾನು ಬಿಡಿಸಿ ಬಿಡಿಸಿ ಹೇಳುತ್ತಿದ್ದೆ. ಹೇಳಲಕ್ಕ ಹತ್ತಿದ್ರ ಇಕಡಿ ಪೈಕಿ ಹೇಳುವುದಿಲ್ಲ. ಕೇಳವರಿಗೆ ಹುಚ್ಚು ಹಿಡಿತದ.ಇಂದಾ ಪುರಾಣ ಹೇಳಲಿಕ್ಕ ಹತ್ತಿದ ಅಂದ್ರೆ ಊರಾಗ ಒಬ್ಬರು ಮನೆಯಾಗಿರುತ್ತಿದ್ದಿಲ್ಲ. ಎಲ್ಲರೂ ಗಾಡಿ ಟ್ರ್ಯಾಕ್ಟರ್ ಹೂಡಿಕೊಂಡು ಜನ ಹೆಚ್ಚು ಬರುತ್ತಿತ್ತು ನೋಡ್ರಿ.

ಮುಂದುವರಿಯುತ್ತದೆ ….

ನಾಳಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.