Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • “ಕೃಷ್ಣಂ ವಂದೇ ಜಗದ್ಗುರು” ಸಿನಿಮಾ ಶುರು
- ಸಿನಿಮಾ

“ಕೃಷ್ಣಂ ವಂದೇ ಜಗದ್ಗುರು” ಸಿನಿಮಾ ಶುರು

“ಕೃಷ್ಣಂ ವಂದೇ ಜಗದ್ಗುರು”ಸಿನಿಮಾ ಶುರು ಕಳೆದ ಹತ್ತು ವರ್ಷಗಳ ಚಂದನವನದ ಸಿನಿಮಾ ಟ್ರ್ಯಾಕ್ ರೆಕಾರ್ಡನ್ನು ನೋಡಿದಾಗ, ಅದರಲ್ಲಿ ಭಾಗಶ: 90 ರಷ್ಟು ಚಲನಚಿತ್ರಗಳು ಹೊಸಬರ ಪ್ರಯತ್ನಗಳೇ ಆಗಿವೆ. ಹೊಸ ಕಲ್ಪನೆ ಪರಿಕಲ್ಪನೆ, ಚಿತ್ರದ ಕಥಾ ವಸ್ತು ಅದನ್ನ ತುಂಬಾ ವಿಭಿನ್ನವಾಗಿ ತೋರಿಸುವಂತಹ ಚಿತ್ರಕಥೆ, ಅದಕ್ಕೆ ಸರಿ ಹೊಂದುವಂತಹ ಸೆನ್ಸಿಬಲ್ ಆದಂತಹ ಸಂಭಾಷಣೆಗಳು ಇಂತಹ ಪರಿಪಕ್ವವಾದಂತ ಕಥಾವಸ್ತುವನ್ನು ಸಿನಿಮಾವಾಗಿ ಮಾಡುವಂತಹ ನಿರಂತರ ಪ್ರಯತ್ನ, ಪ್ರತಿಯೊಂದು ಕಾಲಘಟ್ಟದಲ್ಲಿಯೂ ಸಹ ಗಟ್ಟಿಯಾಗಿ ಮಾಡಿಕೊಂಡು ಬಂದಿವೆ, ಮುಂದೆಯೂ ಕೂಡ ಬರುತ್ತವೆ ಕಾರಣ. ಚಂದನವನ […]

“ಕೃಷ್ಣಂ ವಂದೇ ಜಗದ್ಗುರು”
ಸಿನಿಮಾ ಶುರು

ಕಳೆದ ಹತ್ತು ವರ್ಷಗಳ ಚಂದನವನದ ಸಿನಿಮಾ ಟ್ರ್ಯಾಕ್ ರೆಕಾರ್ಡನ್ನು ನೋಡಿದಾಗ, ಅದರಲ್ಲಿ ಭಾಗಶ: 90 ರಷ್ಟು ಚಲನಚಿತ್ರಗಳು ಹೊಸಬರ ಪ್ರಯತ್ನಗಳೇ ಆಗಿವೆ.

ಹೊಸ ಕಲ್ಪನೆ ಪರಿಕಲ್ಪನೆ, ಚಿತ್ರದ ಕಥಾ ವಸ್ತು ಅದನ್ನ ತುಂಬಾ ವಿಭಿನ್ನವಾಗಿ ತೋರಿಸುವಂತಹ ಚಿತ್ರಕಥೆ, ಅದಕ್ಕೆ ಸರಿ ಹೊಂದುವಂತಹ ಸೆನ್ಸಿಬಲ್ ಆದಂತಹ ಸಂಭಾಷಣೆಗಳು ಇಂತಹ ಪರಿಪಕ್ವವಾದಂತ ಕಥಾವಸ್ತುವನ್ನು ಸಿನಿಮಾವಾಗಿ ಮಾಡುವಂತಹ ನಿರಂತರ ಪ್ರಯತ್ನ, ಪ್ರತಿಯೊಂದು ಕಾಲಘಟ್ಟದಲ್ಲಿಯೂ ಸಹ ಗಟ್ಟಿಯಾಗಿ ಮಾಡಿಕೊಂಡು ಬಂದಿವೆ, ಮುಂದೆಯೂ ಕೂಡ ಬರುತ್ತವೆ ಕಾರಣ.

ಚಂದನವನ ಸೇರಿ ಭಾರತೀಯ ಚಿತ್ರರಂಗದ ಯಾವುದೇ ಭಾಷೆಯಲ್ಲಿ ಸಿನಿಮಾ ಮಾಡಲು ಮುಂದೆ ಬರುವ, ಕಥೆಗಾರ ನಿರ್ದೇಶಕ, ತಾನು ಮಾಡಿಕೊಂಡ ಒಂದೊಳ್ಳೆಯ ಕಥೆಯನ್ನ ಸಿನಿಮಾ ವಾಗಿಸುವಲ್ಲಿ ಶ್ರಮ ಹಾಕುತ್ತಲೇ,ಅದಕ್ಕೆ ತಕ್ಕ ನಿರ್ಮಾಪಕರನ್ನು ಹುಡುಕಿ,ಕಲಾವಿದರನ್ನು ಸಿದ್ದ ಮಾಡಿ, ಒಂದೊಳ್ಳೆ ಪೋಸ್ಟರ್ ಅನ್ನು ಲಾಂಚ್ ಮಾಡುವುದರ ಮೂಲಕ ತಮ್ಮ ಕನಸಿನ ಪ್ರಾಜೆಕ್ಟ್ ಗೆ ಅಧಿಕೃತವಾಗಿ ಚಾಲನೆಯನ್ನು ಕೊಡುತ್ತಾರೆ.ಹೊಸ ಯೋಚನೆ, ಹೊಸ ಆಲೋಚನೆಯ,ಹೊಸ ತಂಡದ ಪ್ರಯತ್ನ
“ಕೃಷ್ಣಂ ವಂದೇ ಜಗದ್ಗುರು” ಎಂಬ ಅಚ್ಚ ಕನ್ನಡ ಚಿತ್ರ.

ದೊಡ್ಡ ದೊಡ್ಡ ಸ್ಟಾರ್ ನಟರು ಸಹ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಅಥವಾ ಸಿನಿಮಾಗೆ ಸಂಬಂಧಪಟ್ಟಂತಹ ಇವೆಂಟ್ಗಳಲ್ಲಿ, ನಮ್ಮ ಚಂದನವನಕ್ಕೆ ಕಥೆಗಾರರು ಬೇಕು ಒಳ್ಳೆಯ ನಿರ್ದೇಶಕರು ಬೇಕು ಎಂಬ ಮಾತನ್ನು ಹೇಳುತ್ತಲೇ ಇರುತ್ತಾರೆ.

ದೊಡ್ಡವರು ಹೇಳಿದಂತೆ ಕರ್ನಾಟಕದ ಅತ್ಯಂತ ಬಹಳಷ್ಟು ಹೊಸ ಯುವಕರು, ತಮ್ಮದೇ ಆದಂತಹ ತಂಡವನ್ನು ಕಟ್ಟಿಕೊಂಡು ಒಳ್ಳೆಯ ಕಥೆಗಳನ್ನು ಸಿನಿಮಾವಾಗಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ, ಅದರಲ್ಲಿ ನಮ್ಮ ಚಂದನವನದ ಭರವಸೆಯ ಯುವ ಪ್ರತಿಭೆ, ಸಂಕಲನಕಾರ ಮತ್ತು ನಿರ್ದೇಶಕ ” ವಸಂತ್ ಕುಮಾರ್ ಗಾಂಗೆಯ”

“ಕೃಷ್ಣಂ ವಂದೇ ಜಗದ್ಗುರು”: ಮಹಾಭಾರತದ ಪಾತ್ರಗಳ ಆಧಾರಿತ ಶುದ್ಧ ಹಾಸ್ಯ ಮತ್ತು ಭಾವನಾತ್ಮಕ ಅಂಶಗಳ ಮೇಲೆ ಬೆಳಕು ಚೆಲ್ಲುವ ಚಿತ್ರ.

ವಯಸ್ಸಿನ ಮಿತಿ ಇಲ್ಲದೆ, ಸಂಪೂರ್ಣ ಕುಟುಂಬ ಸಮೇತ ಒಟ್ಟಿಗೆ ಕುಳಿತು ನೋಡುವ ಚಿತ್ರ ಇದಾಗಲಿದೆ, ಎಂಬ ಭರವಸೆಯನ್ನ ನಿರ್ದೇಶಕರು ನೀಡಿದ್ದಾರೆ.

“War of Karma & Dharma” ಎಂಬ ಅಡಿಬರಹದ ಕನ್ನಡ ಚಿತ್ರ “ಕೃಷ್ಣಂ ವಂದೇ ಜಗದ್ಗುರು” ಶೀರ್ಷಿಕೆಯನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಲಾಗಿದೆ. ವಸಂತ್ ಗಾಂಗೇಯ ಅವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಕನ್ನಡ ಚಿತ್ರರಂಗದಲ್ಲಿ ಬಹಳ ಕಾಲದಿಂದ ಕಾಣದ ನೈಜ ಹಾಸ್ಯವನ್ನು ಪ್ರೇಕ್ಷಕ ಮಹಾಪ್ರಭುಗಳ ಹೃದಯವನ್ನು ಕಟ್ಟಲು ಈ ಚಿತ್ರ ಪ್ರಯತ್ನವನ್ನ ಮಾಡಲಿದೆ ಎಂಬುದು ಚಿತ್ರತಂಡದ ಮಾತು.

ಹಿಂದೂ ಧರ್ಮದ ಮಹಾಕಾವ್ಯಗಳಲ್ಲಿ ಒಂದಾದ
ಮಹಾಭಾರತ,ಅದರಲ್ಲಿನ ಪಾತ್ರಗಳನ್ನು ಆಧರಿಸಿದ ಹಾಸ್ಯ ಮಿಶ್ರಿತ ಭಾವನಾತ್ಮಕ ಚಿತ್ರ ಇದಾಗಲಿದ್ದು,ಈ ಚಿತ್ರದಲ್ಲಿ ಯಾವುದೇ ರೀತಿಯ ಬಲವಂತದ ಹಾಸ್ಯವನ್ನು ತುರುಕದೆ ಕೇವಲ ಪಾತ್ರಗಳು ಮತ್ತು ಸನ್ನಿವೇಶಗಳಿಂದಲೇ ನಗು ಹುಟ್ಟುತ್ತದೆ,ಅಂತಹ ವಿಶೇಷವಾದ ಪ್ರಯತ್ನ ನಮ್ಮ ತಂಡ ಮಾಡಲಿದೆ ಎಂದರು.

ಇಲ್ಲಿಯ ತನಕ ಕನ್ನಡದಲ್ಲಿ ಬಹಳಷ್ಟು ಸಿನಿಮಾಗಳು ಬಂದಿದ್ದು ಅವುಗಳಲ್ಲಿ ನಮ್ಮ ಚಿತ್ರ,ಸುದೀರ್ಘ ಅಂತರದ ನಂತರ, ನೈಜ ಹಾಸ್ಯದ ಮೂಲಕ ನೋಡುಗರನ್ನ ಸೆಳೆಯಲಿದೆ.

ಈ ಚಿತ್ರಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಇದರಲ್ಲಿ ಅಶ್ಲೀಲತೆ, ಅಶ್ಲೀಲ ಪದಗಳು ಮತ್ತು ದ್ವಂದ್ವಾರ್ಥದ ಹಾಸ್ಯ ಇಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ, ಮಕ್ಕಳು, ಪೋಷಕರು ಮತ್ತು ಅಜ್ಜ-ಅಜ್ಜಿಯರು ಎಲ್ಲರೂ ಒಟ್ಟಿಗೆ ಕುಳಿತು ಚಿತ್ರಮಂದಿರದಲ್ಲಿಯೇ ನೋಡಬಹುದಾದ ಅಪ್ಪಟ ಕನ್ನಡ ಸೊಗಡಿನ ಚಿತ್ರ ಇದಾಗಲಿದೆ ಎಂದು ನಿರ್ದೇಶಕರು ಅಭಿಪ್ರಾಯಪಟ್ಟರು.

ಶೀರ್ಷಿಕೆಯ ವಿನ್ಯಾಸವು ಅದರ ರಾಜಗಾಂಭೀರ್ಯ ಮತ್ತು ದೈವಿಕ ನೋಟದಿಂದ ಗಮನ ಸೆಳೆದಿದೆ. ಚಿತ್ರವನ್ನು “A Film By Gangeya” ಎಂದು ಪ್ರಸ್ತುತಪಡಿಸಲಾಗಿದೆ.

ಚಿತ್ರದ ತಾಂತ್ರಿಕ ವರ್ಗದಲ್ಲಿ,
ಸಂಕಲನ ಮತ್ತು ನಿರ್ದೇಶಕರಾಗಿ ವಸಂತ್ ಗಾಂಗೇಯ,
ಛಾಯಾಗ್ರಾಹಕರಾಗಿ ರಾಕೀ,ಸಂಗೀತ ನಿರ್ದೇಶಕರಾಗಿ ಚೇತನ್,
ಕಲರಿಸ್ಟ್ ಆಗಿ ಕೊಂಡೂರು ದೀಪಕ್ ರಾಜು ಇದ್ದಾರೆ.
ನಿರ್ಮಾಪಕರಾಗಿ ಲಾರ್ಡ್ ಕೃಷ್ಣ ಮತ್ತು ತಂಡ ಈ ಪ್ರಯತ್ನವನ್ನ ಮಾಡುತ್ತಿದ್ದಾರೆ.

ಸಂಪೂರ್ಣವಾಗಿ ಇಡೀ ಕುಟುಂಬ ಚಿತ್ರಮಂದಿರದಲ್ಲಿ, ಕುಳಿತು ಆನಂದಿಸುವ ಚಿತ್ರವನ್ನು ನೀಡಲು ತಂಡ ಶ್ರಮಿಸುತ್ತಿದೆ ಎಂದು ನಿರ್ದೇಶಕ ವಸಂತ್ ಕುಮಾರ್ ಕೆ ಹೇಳಿದ್ದಾರೆ.

ಇನ್ನು “ಕೃಷ್ಣಂ ವಂದೇ ಜಗದ್ಗುರು” ಚಿತ್ರಕ್ಕೆ ಸಂಬಂಧಪಟ್ಟಂತಹ
ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂಬುದನ್ನ ಚಿತ್ರತಂಡ ಅಧಿಕೃತವಾಗಿ ಹೇಳಿಕೊಂಡಿದೆ

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.