Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಹಳ್ಳೂರಿನಲ್ಲಿ ನಡೆದ ಘಟನೆ
- ಕ್ರೀಡೆ | ಆಧ್ಯಾತ್ಮ | ರಾಜಕೀಯ

ಹಳ್ಳೂರಿನಲ್ಲಿ ನಡೆದ ಘಟನೆ

ಹಳ್ಳೂರಿನಲ್ಲಿ ನಡೆದ ಘಟನೆ… ಢವಳಗಿ ಗುಂಡಪ್ಪ ಶರಣಂತಿದ್ದರು ಅವರಿಗೆ ನಮ್ಮ ಹಳ್ಳೂರ್ ಅವರು ಶಿಷ್ಯರಿದ್ದರು. ನಾ ಗುರುಪಾದಕ ಹೊಂದಿ ಒಂದು ತಿಂಗಳಾಗಿತ್ತು. ಅವರು ಸಂಗಮನಾಥನ ಗುಡಿಗೆ ಬರುತ್ತಿದ್ದರು. ನಾವು ಅಲ್ಲಿಗೆ ಹೋಗಿದ್ದೇವ್ರಿ. ಅವರಿಗೆ ನನ್ನ ಉಪದೇಶ ಆಗಿದ್ದು ಗೊತ್ತಿತ್ತು. ನನಗ ಪಡೆಕನೂರ ಮುತ್ಯಾ ಎರಡು ರುದ್ರಾಕ್ಷಿಯನ್ನು ಕೊಟ್ಟಿದ್ದರು. ಒಮ್ಮೆ ನಮ್ಮ ಗುರುಗಳು ಇಲ್ಲೇ ಹಳ್ಳೂರ್ ಒಳಗಿದ್ದರು ಯಪ್ಪಾ ಹಿಂಗ ಪಡೆ ಮುತ್ಯ ಎರಡು ರುದ್ರಾಕ್ಷಿ ಕೊಟ್ಟಾರಂತ ಗುರುಗಳಿಗೆ ಹೇಳಿದೆ. ಮತ್ತು ಎರಡು ರುದ್ರಾಕ್ಷಿ ಮಂತರಿಸಿ ಕೊಟ್ರು. ಯಾರರ […]

ಹಳ್ಳೂರಿನಲ್ಲಿ ನಡೆದ ಘಟನೆ…

ಢವಳಗಿ ಗುಂಡಪ್ಪ ಶರಣಂತಿದ್ದರು ಅವರಿಗೆ ನಮ್ಮ ಹಳ್ಳೂರ್ ಅವರು ಶಿಷ್ಯರಿದ್ದರು. ನಾ ಗುರುಪಾದಕ ಹೊಂದಿ ಒಂದು ತಿಂಗಳಾಗಿತ್ತು. ಅವರು ಸಂಗಮನಾಥನ ಗುಡಿಗೆ ಬರುತ್ತಿದ್ದರು. ನಾವು ಅಲ್ಲಿಗೆ ಹೋಗಿದ್ದೇವ್ರಿ. ಅವರಿಗೆ  ನನ್ನ ಉಪದೇಶ ಆಗಿದ್ದು ಗೊತ್ತಿತ್ತು. ನನಗ ಪಡೆಕನೂರ ಮುತ್ಯಾ ಎರಡು ರುದ್ರಾಕ್ಷಿಯನ್ನು ಕೊಟ್ಟಿದ್ದರು.
ಒಮ್ಮೆ ನಮ್ಮ ಗುರುಗಳು ಇಲ್ಲೇ ಹಳ್ಳೂರ್ ಒಳಗಿದ್ದರು ಯಪ್ಪಾ ಹಿಂಗ ಪಡೆ ಮುತ್ಯ ಎರಡು ರುದ್ರಾಕ್ಷಿ ಕೊಟ್ಟಾರಂತ ಗುರುಗಳಿಗೆ ಹೇಳಿದೆ. ಮತ್ತು ಎರಡು ರುದ್ರಾಕ್ಷಿ ಮಂತರಿಸಿ ಕೊಟ್ರು.
ಯಾರರ ಏನಾರ ಕೇಳುತ್ತಾರೇನೆಪ ಅಂದೆ.
ಹೋಗ ಹೋಗ ಯಾವ ಏನು ಕೇಳುತ್ತಾನೋ ಹೋಗ ಅಂದ್ರು ಅದ್ರಾಗ ಒಂದು ನನ್ನ ಹೆಂಡತಿಗೆ ಕೊಟ್ಟೆ ನಾವೊಂದು ಕಟ್ಟಿಕೊಂಡೆ.
ಗುರುಗಳು ಮನ್ಯಾಗಿದ್ದರು ಚಹಾದ ಅಂಗಡಿಗೆ ಚುಡಾ ತರಕ್ಕೆ ಬಂದಿದ್ದೆ. ಢವಳಿಗಿಯ ಗುಂಡಪ್ಪ ಶರಣ ಮತ್ತು ಏಳೆಂಟು ಶಿಷ್ಯರು ಕೂಡಿಕೊಂಡು ಅದೇ ಚಹಾದ ಅಂಗಡ್ಯಾಗ ಚಹಾ ಕುಡುಕಂತ ಕುಂತಿದ್ರು ಅವಾಗ ಅದ ರುದ್ರಾಕ್ಷಿ ಕಟ್ಕೊಂಡಿದ್ದೆ. ಆ ಗುಂಡಪ್ಪ ಶರಣ ನನ್ನ ಕೆಳಗ ಮ್ಯಾಗ ನೋಡಿದ ಮತ್ತ ರುದ್ರಾಕ್ಷಿ ಕಟ್ಟಿದ್ದನ್ನು ದಿಟ್ಟಿಸಿ ನೋಡಾಕ್ ಹತ್ತಿದ.
ನನಗೆ ಯಾವೂರು ? ಅಂದ. ಯಾವಾಗ ಇವ ಹಿಂಗ ಕೆಳಕ್ಕ ಹತ್ಯಾನಂದ್ರ ನಾನು ಇವ0ಗ ಎದುರು ಹಚ್ಚಬೇಕು ಅಂತ ಅಂದುಕೊಂಡು -
ಬಿಸಲದಿನ್ನಿಯಾ೦ವ ಅಂದೆ
ಬಿಸಲದಿನ್ನಿ ಒಳಗ ಯಾವ ಮಠದಾವ ?
ಮ್ಯಾಗಿನ ಮಠದಾವರಿ
ಮ್ಯಾಗಿನ ಮಠದಾಗ ಯಾರ ಅದಾರ ? ಅಂದ.
ಅಷ್ಟು ಹೊತ್ತಿಗೆ ನಾನು ಆ ಮಠದಾಗ ಯಾರದು ಅಧಿಕಾರ ಇದೆ ಅಂತ ತಿಳಿದುಕೊಂಡಿದ್ದೆ ಅದಕ್ಕ ಆ ಮಠದಾಗ ಬಸಲಿಂಗಪ್ಪನವರು ಅದಾರಿ ಅಂದೆ.
ಮತ್ತೆ ರುದ್ರಾಕ್ಷಿ ಇಲ್ಲಿ ಯಾಕ ಕಟ್ಟಿದಿ ಅಂದ.
ಏನಪ್ಪಾ ನೀ ಕೇಳಿದೆ ನಾ ಕಟ್ಟಿನಿ
ಅದೆಲ್ಲಾ ಬಿಡು. ನಿಮ್ಮ ಗುರು ಯಾರು ಅಂತ ಅಂದ
ನಮ್ಮ ಗುರುಗಳು ಇಂಥವರು ಅಂದೆ.
ಏಯ್ ಪತ್ರ ತಗೋರಿ ಪತ್ರ ಹಾಕೋನು ಅಂತ ತಮ್ಮ ಶಿಷ್ಯ ಮಕ್ಕಳಿಗೆ ಅಂದ.
ಯಪ್ಪಾ ಪತ್ರಕ್ಕ ಯಾಕ್ಕ 15 ಪೈಸೆ ಖರ್ಚು ಮಾಡುತ್ತೀರಿ.ಕೇಳುವುದಿದ್ದರೆ ಗುರುಗಳು ಇಲ್ಲೇ ಅದಾರ ಕೇಳು ಬರ್ರಿ ಅಂದೆ.ನಡಿರೋ ಎಲ್ಲರೂ ಹೋಗೋಣ ಅಂತ ಬಂದುಬಿಟ್ಟರು.
ಹಿಂಗ್ ಅಂದು ಕೂಡಲೇ ಚುಡಾ ತಗೊಂಡು ನಾನು ಮುಂದೆ ಮುಂದೆ ಓಡಿ ಬಂದೆ ಬಿಟ್ಟೆಬಂದವನೇ ನಮ್ಮ ಗುರುಗಳಿಗೆ ಎಲ್ಲ ವಿಷಯ ಹೇಳಿಬಿಟ್ಟೆ. ಅಲ್ಲಿಯವರೆಗೆ ಎಲ್ಲರೂ ದಬ ದಬ ಅಂತ ಸದ್ದು ಮಾಡುತ್ತಾ ಗುಡಿಯ ಕಡೆ ಬಂದುಬಿಟ್ಟರು ನಮ್ಮ ಮನೆಯ ಮುಂದೆ ಗುಡಿಯ ದಾರಿ ಗುಡಿ ಒಳಗೆ ಎಲ್ಲರೂ ಕುಳಿತಿರು ನಾವು ಹೋಗಿ ಕುಳಿತೆವು ಅವರೆಲ್ಲರೂ ನಶೆ ಮಾಡಿದವರು ಒಬ್ಬರಿಗೊಬ್ಬರು ನಮಸ್ಕಾರ ಮಾಡಿಕೊಂಡರು ಗುರುಗಳಿಗೆ ತಮ್ಮ ಪಕ್ಕದಲ್ಲಿ ಕುಳಿರಿಸಿಕೊಂಡರು ನಾನು ಮಧ್ಯದಲ್ಲಿ ಕುಳಿತೆ.
ಯಪ್ಪಾ... ಅಂದೆ
ಯಾಕಪ್ಪ ..ಅಂದ್ರು ಗುರುಗಳು •
ನೀವು ಈಗ ಮಾತಾಡು ಎಲ್ಲಾ ಮಾತು ಬಿಡ್ರಿ. ಅವರು ಪ್ರಶ್ನೆ ಬ್ಯಾರೆ ಮಾಡ್ಯಾರ ಅಂದೆ.
ಏನಪ್ಪಾ ಅದು ಪ್ರಶ್ನೆ ಅಂದ್ರು.
ಈ ರುದ್ರಾಕ್ಷಿ ಇಲ್ಯಾಕ್ಕ ಕಟ್ಟಿದಿ, ? ಮತ್ತ ಯಾರು ಕಟ್ಟಿದರು ? ರಟ್ಟಿಗಿ ಕಟ್ಟ ಬೇಡ ಅಂದಾರೇನು ? ಇಂಗೆಲ್ಲಾ ಪ್ರಶ್ನೆ ಹಾಕ್ಯಾರಿ ಮತ್ತು ನಿಮಗೆ ಪತ್ರ ಬರೆದು ಹಾಕಕ್ ನಿಂತಾರ ಅದಕ್ಕ ನೀವು ಇಲ್ಲೇ ಇದ್ದೀರಿ ಪತ್ರಕ ಯಾಕ ರೊಕ್ಕ ಖರ್ಚು ಮಾಡುತ್ತೀರಿ ಬಂದು ಕೇಳ್ರಿ ಅಂದೆ.
ಎಲ್ಲಾ ನಿನ್ನ ಸುಳ್ಳಿ ಗುಂಡಪ್ಪ ಮಗನೇ ನೀ ಲಿಂಗಾಯತ . ಲಿಂಗ ಇಲ್ಲ್ಯಾಕ ಕಟ್ಟಿದಿ ಹಿಂದು ಕೊಂಡಿಗೆ ಕಟ್ಟಬೇಕಿಲ್ಲ. ಇಂದು ಹುಟ್ಟಿದ ಇಂದ ಕಣ್ಣು ಬಿಟ್ಟಿಮಕ್ಕಳಿಗೆ ನೀರು ಹಾಕೋದು ಬಿಟ್ಟುಚಂಡಿ ಚೋಟಾಕ್ಕ ಹತ್ತಿರಿ ? ರುದ್ರಾಕ್ಷಿ ನೆಲೆ ಅವನಿಗೆ ಏನು ಕೇಳುತ್ತಿಯೋ ಸಿಕ್ಕಾಪಟ್ಟೆ ಕೋಪಗೊಂಡು - ಏ ಹಗ್ಗ ತಗೊಂಡ್ ಬರ್ಲೆ .ಅವನು ಕೊರಳಿಗೆ ಹಗ್ಗ ಹಾಕಿ ಕಟ್ಟಿರಿ ಅಂದ್ರು.ಅವಾ ರುದ್ರಾಕ್ಷಿ ನೆಲೆ ಹೇಳಿದ್ರ ನನ್ನನ್ನು ಕಡಿರಿ. ಲಿಂಗದ ನೆಲೆ ಹೇಳಿಕ್ರ ಜಾಂಗ ಕಡೀರಿ ಅಂದ್ಬಿಟ್ರು.
ಆ ಶರಣನ ಬಾಯಿ ಒಣಗಿಬಿಟ್ಟು ನಶೆಯು ಇಳಿದು ಹೋಯಿತು. ನೀರು ನೀರು ಅನ್ನಲಿಕ್ಕೆ ಹತ್ತಿದ. ಅವರ ಶಿಷ್ಯ ನಿಂಗಪ್ಪಗೌಡ ಅಂತ ಹೇಳಿ ನಮ್ಮ ಗೌಡರಿಗೆ ಬಹಳ

ಪ್ರೇಮದವ. ಅವರು ಅಪ್ಪ … ಅಪ್ಪ … ಅಂತ ಗುರುಗಳ ಕಾಲು ಹಿಡಿಯಲಿಕ್ಕೆ ಹತ್ತಿದರು. ಇವನನ್ನು ಬಿಡುವುದಿಲ್ಲ ಅನ್ನಾಕ್ಕ ಹತ್ತಿದರು ಗುರುಗಳು. ನಮ್ಮ ಗುರುಗಳು ಅವರ ಸಿಟ್ಟು ನೋಡಿ ನಾನು ಗಾಬರಿಗೊಂಡೆ, ಆ ಶರಣ ಹಗುರವಾಗಿ ಎದ್ದವನೇ ನೇರವಾಗಿ ಗುರುಗಳ ಪಾದವನ್ನು ಹಿಡಿದುಕೊಂಡ.

ಮುಂದುವರಿಯುತ್ತದೆ ….

ನಾಳಿನ ಸಂಚಿಕೆಯಲ್ಲಿ ತಪ್ಪದೇ ಓದಿರಿ.


Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.