Wednesday, 30 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • “ರಾವೆನ್” ಟ್ರೈಲರ್ ಲಾಂಚ್ ಮಾಡಿದ ಆಕ್ಷನ್ ಪ್ರಿನ್ಸ್ “ಧ್ರುವ ಸರ್ಜಾ”
- ಸಿನಿಮಾ

“ರಾವೆನ್” ಟ್ರೈಲರ್ ಲಾಂಚ್ ಮಾಡಿದ ಆಕ್ಷನ್ ಪ್ರಿನ್ಸ್ “ಧ್ರುವ ಸರ್ಜಾ”

ರಾವೆನ್ ಟ್ರೈಲರ್ ಲಾಂಚ್ ಮಾಡಿದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. ಕಾರ್ಯಕ್ರಮವೊಂದಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬರ್ತಾರೆ ಎಂಬ ಸುದ್ದಿ ಆಯಾ ಚಿತ್ರ ತಂಡದ ಎಲ್ಲ ಸದಸ್ಯರುಗಳಲ್ಲಿ ಹಾಗೂ ಗ್ರೂಪ್ ಗಳಲ್ಲಿ ಹಂಚಿಕೆಯಾದಾಗ, ತಮ್ಮ ಚಿತ್ರದ ಟ್ರೈಲರ್ ಲಾಂಚ್ ಅಥವಾ ಆಡಿಯೋ ಲಾಂಚ್ ಗಾಗಿ ಬರುವಂತಹ ಧ್ರುವ ಸರ್ಜಗಾಗಿಯೇ ಕಾಯುವಂತಹ ಕಲಾವಿದರ ದಂಡು ಇದ್ದೇ ಇದೆ. ಅದು ಧ್ರುವ ಸರ್ಜಾ ಉಳಿಸಿಕೊಂಡು ಬಂದಂತಹ ಘನತೆ ಮತ್ತು ಗೌರವದ ಸಂಕೇತ. ಚಿತ್ರತಂಡ ಹೊಸದಾಗಿರಲಿ ಅಥವಾ ಹಳಬರದಾಗಿರಲಿ ಆ […]

ರಾವೆನ್ ಟ್ರೈಲರ್ ಲಾಂಚ್ ಮಾಡಿದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ.

ಕಾರ್ಯಕ್ರಮವೊಂದಕ್ಕೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬರ್ತಾರೆ ಎಂಬ ಸುದ್ದಿ ಆಯಾ ಚಿತ್ರ ತಂಡದ ಎಲ್ಲ ಸದಸ್ಯರುಗಳಲ್ಲಿ ಹಾಗೂ ಗ್ರೂಪ್ ಗಳಲ್ಲಿ ಹಂಚಿಕೆಯಾದಾಗ, ತಮ್ಮ ಚಿತ್ರದ ಟ್ರೈಲರ್ ಲಾಂಚ್ ಅಥವಾ ಆಡಿಯೋ ಲಾಂಚ್ ಗಾಗಿ ಬರುವಂತಹ ಧ್ರುವ ಸರ್ಜಗಾಗಿಯೇ ಕಾಯುವಂತಹ ಕಲಾವಿದರ ದಂಡು ಇದ್ದೇ ಇದೆ.

ಅದು ಧ್ರುವ ಸರ್ಜಾ ಉಳಿಸಿಕೊಂಡು ಬಂದಂತಹ ಘನತೆ ಮತ್ತು ಗೌರವದ ಸಂಕೇತ. ಚಿತ್ರತಂಡ ಹೊಸದಾಗಿರಲಿ ಅಥವಾ ಹಳಬರದಾಗಿರಲಿ ಆ ತಂಡದಲ್ಲಿ ಧ್ರುವ ಸರ್ಜಾ ರವರಿಗೆ ಪರಿಚಯವಿರುವ ಯಾವುದಾದರೂ ಒಬ್ಬ ವ್ಯಕ್ತಿ ಇದ್ದರೂ ಸಾಕು ಆ ಕಾರ್ಯಕ್ರಮಕ್ಕೆ ಧ್ರುವ ಸರ್ಜಾ ಬಂದೇ ಬರುತ್ತಾರೆ ಇದು ಖಚಿತ.

ಧ್ರುವ ಸರ್ಜಾ ಸ್ನೇಹಕ್ಕೆ ಬೆಲೆ ಕೊಡುವವರು, ಪ್ರೀತಿ ಗೌರವಕ್ಕೆ ತಲೆಬಾಗುವವರು, ಕಾರ್ಯಕ್ರಮ ಶುರುವಾಗುವುದು ತಡವಾದರೂ ಸರಿ ಅಥವಾ ಮುಗಿಯುವುದು ಸ್ವಲ್ಪ ಹೆಚ್ಚು ಕಮ್ಮಿಯಾದರೂ ಸರಿ ತಾವು ತಮ್ಮ ಕರ್ತವ್ಯವನ್ನ ಮಾಡಿ ಅಲ್ಲಿರುವ ಎಲ್ಲರ ಪ್ರೀತಿಗೆ ತಲೆಬಾಗಿ ಕಾರ್ಯಕ್ರಮದಿಂದ ನಿರ್ಗಮಿಸುತ್ತಾರೆ.

ರಾವೆನ್ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ಆಗಿದ್ದು ಕೂಡ ಇದೆ, ಧ್ರುವ ಸರ್ಜಾ ಮತ್ತು ಹಿರಿಯ ನಿರ್ಮಾಪಕರಾದ ಭಾ ಮಾ ಹರೀಶ್ ಬರ್ತಾ ಇದ್ದ ಹಾಗೆ, ವೇದಿಕೆ ಮೇಲೆ ದೀಪ ಬೆಳಗುವುದರ ಕಾರ್ಯಕ್ರಮ ನಡೆಯಿತು ತಕ್ಷಣವೇ ಧ್ರುವ ಸರ್ಜಾ ಟ್ರೈಲರ್ ಲಾಂಚ್ ಜೈ ಆಂಜನೇಯ ಎಂದರು.

ಟ್ರೈಲರ್ ನೋಡಿದ ನಂತರ ವೇದಿಕೆ ಮೇಲೆ ಬಂದ ಬಾ ಮಾ ಹರೀಶ್ ಮತ್ತು DX ಮ್ಯಾಕ್ಸ್ ದಯಾನಂದ ಮತ್ತು ಗೌರವಾನ್ವಿತ ಮಹಿಳೆಯೊಬ್ಬರು ಈ ಎಲ್ಲರೂ ಸೇರಿ ಹಾಡು ಲಾಂಚ್ ಮಾಡಿದರು.

ಚಿತ್ರದ ಕಂಟೆಂಟ್ ನೋಡಿದ ನಂತರ ನಮಗೆ ಅನಿಸಿದ್ದು,
ರಾವೆನ್ ಬಹುಶಃ ಕರ್ಮ ಸಿದ್ಧಾಂತಗಳ ಮೇಲೆ ಬೆಳಕು ಚೆಲ್ಲುವ ಕಥೆ ಇರಬಹುದು.

ಚಿತ್ರದ ಟ್ರೈಲರ್ ಹೇಳುವ ಹಾಗೆ,ಇಲ್ಲೊಂದು ತನಿಖಾ ಅಧಿಕಾರಿ ಯಾವುದೋ ಕೇಸಿಗೆ ಸಂಬಂಧಪಟ್ಟಂತಹ ಅಪರಾಧಿಗಳನ್ನ ಅಥವಾ ಅದಕ್ಕೆ ಸಂಬಂಧಿಸಿದ ಒಂದಷ್ಟು ಸಾಕ್ಷಿಗಳನ್ನ ಹುಡುಕುತ್ತಿರುವ ಕಂಟೆಂಟ್ ಕ್ಯಾರಿಯಾಗಿದೆ.

ಮಕ್ಕಳನ್ನ ಸಾಕು ಬದಲು,
ನಿನ್ನಂತಹ ಪ್ರಾಣಿಗಳನ್ನು ಸಾಕಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು ಎಂದು ಕಾಗೆಯ ಪಾಯಿಂಟ್ ಆಫ್ ನಲ್ಲಿ ಹೇಳುವ ಸಂಭಾಷಣೆ ಕೇಳಿದಾಗ, ಇಲ್ಲಿ ಪ್ರಾಮಾಣಿಕತೆ ಮತ್ತು ನಿಯತ್ತಿಗೆ ಸಂಬಂಧಪಟ್ಟಂತಹ ವಿಚಾರ ಇದೆ ಎನ್ನಬಹುದು.

ಮನುಷ್ಯನೊಬ್ಬ ತಪ್ಪು ಮಾಡುತ್ತಾನೆ ಸಹಜ, ಆದರೆ ಮಾಡಿದ ತಪ್ಪನ್ನು ಪದೇಪದೇ ಮಾಡುತ್ತಾ ಹೋದಾಗ ಅದಕ್ಕೆ ತಕ್ಕದಾದ ಶಿಕ್ಷೆ ಆಗುತ್ತದೆ ಎಂಬುದು ಕಥೆಯ ಪ್ರಮುಖ ತಿರುಳಾಗಿದೆ ಎನ್ನಬಹುದು.

ವಿಶ್ವ ಪ್ರೊಡಕ್ಷನ್ ಹೌಸ್ ನಲ್ಲಿ ನಿರ್ಮಾಣ ಮಾಡಿರೋ ಈ ಚಿತ್ರಕ್ಕೆ,ವಿಶ್ವನಾಥ ಜಿ ಪೀ ನಿರ್ಮಾಪಕರು,ಇವರು ಮಾತನಾಡಿ.
ಪಿತೃಪಕ್ಷದ ಸಮಯದಲ್ಲಿ ಕಾಗೆ ಪ್ರಮುಖ ಪಾತ್ರ ವಹಿಸುತ್ತದೇ.ಕನ್ನಡ,
ತೆಲುಗು,ತಮಿಳು,ಹಿಂದಿ,ಮಲಯಾಳಂ, ಮಾಡ್ತಾ ಇದೀವಿ,
ಕೊರಿಯನ್ ಮತ್ತು ಚೈನೀಸ್ ನಲ್ಲಿ ರಿಲೀಸ್ ಮಾಡ್ತಾ ಇರೋದು ನನ್ನ ಸ್ನೇಹಿತರೇ ಎಂದರು.

ನಿರ್ದೇಶಕ ವೇದ್ ಮಾತನಾಡಿ
ಇದು ನನ್ನ ಎರಡನೇ ಚಿತ್ರ,ರಾವೆನ್ ಕಥೆಯಲ್ಲಿ ಕಾಗೆ ತುಂಬಾ ಮುಖ್ಯ ಪಾತ್ರ.ಸುಚೇಂದ್ರ ಪ್ರಸಾದ್ ಇಲ್ಲಿ ಕ್ರಿಶ್ಚಿಯನ್ ಫಾದರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಹಾಗೇ ಚಿತ್ರದಲ್ಲಿ ದೇವ್ ದೇವಯ್ಯ, ದಿಲೀಪ್ ಪೈ,ಸ್ವಪ್ನ ಶೆಟ್ಟಿಗಾರ್, ದಿನೇಶ್ ಮಂಗಳೂರು, ಸುಚೇಂದ್ರ ಪ್ರಸಾದ್,ಚೈತ್ರಾ ರಾಮ್ ಸೇರಿದಂತೆ ಇನ್ನೂ ಹಲವರು ಇದ್ದಾರೆ ಎಂಬ ಮಾಹಿತಿ ಕೊಟ್ಟರು ಹಾಗೆ ಚಿತ್ರಕ್ಕೆ
ರಾಕೇಶ್ ಸಿ ತಿಲಕ್ ಛಾಯಾಗ್ರಹಣ,
ಮ್ಯಾಡ್ ಡಿ ಸಂಗೀತವಿದೇ ಎಂದರು.

ಪ್ರಮುಖ ಕಲಾವಿದರಾಗಿ ಕಾಣಿಸಿಕೊಂಡ,
ದಿಲೀಪ್ ಪೈ, ಕಾಗೆ ಇಲ್ಲಿ ಮುಖ್ಯ ಪಾತ್ರ,ಇಲ್ಲಿ ನಾನು ಒಬ್ಬ ಕಥೆಗಾರನಾಗಿ ಪಾತ್ರ ಮಾಡಿದ್ದು,ನಾಯಕಿಯ ಹಿಂದೆ ಬಿದ್ದಿರುವ ರೋಮಿಯೋ,ತುಂಬಾ ಮಜವಾದ ಪಾತ್ರ ಎಂದರು,ನಂತರ ಮಾತನಾಡಿದ ಇನ್ನೊಬ್ಬ ಹೀರೋ ದೇವ್ ದೇವಯ್ಯ,
ಇಲ್ಲಿ ನಾನು ತನಿಖಾಧಿಕಾರಿ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದು,ನಾನಿಲ್ಲಿ ಅಂಡರ್ ಕವರ್ ಆಫೀಸರ್ ಆಗಿ ನಟಿಸಿದ್ದು, ಒಂದಷ್ಟು ಕುತೂಹಲಕಾರಿ ಸಂಗತಿಗಳ ಹಿಂದೆ ಬೆನ್ನು ಹತ್ತಿ ತುಂಬಾ ಕಠಿಣವಾದ ಅಂತಹ ತನಿಖೆಯನ್ನು ಮಾಡುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು,ಇನ್ನೂ
ನಾಯಕಿ ಸಪ್ನಾ ಶೆಟ್ಟಿಗಾರ್,ನಾನಿಲ್ಲಿ ಬರಹಗಾರಳಾಗಿ ಕೆಲಸ ಮಾಡಿದ್ದು, ನಟಿಯಾಗಿ ನಾನು ಸಿನಿಮಾಗಳನ್ನು ಮಾಡಿದ್ದೇನೆ,ಆದರೆ ಇದೊಂದು ವಿಭಿನ್ನವಾದ ಕಥೆ ಮತ್ತು ಪಾತ್ರ. ನಮ್ಮಂತಹ ಅನೇಕ ಕಲಾವಿದರಿಗೆ ಹೊಸ ದಾರಿ ತೋರಿಸತ್ತೆ ಎಂಬ ಆಶಯ ವ್ಯಕ್ತಪಡಿಸಿದರು.

ರವೀ ಸಾಸನೂರ್
MasterNews365.Com

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.