Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • 25 ತತ್ವಗಳ ಮಹತ್ವ…..!!

25 ತತ್ವಗಳು ಅದಾವು. ಇದರಾಗ ಅಪ್ಪು ತೇಜ ವಾಯು ಆಕಾಶ ಇವು ಐದು ಕೂಡಿಕೊಂಡಾವು. ಪಂಚಭೂತಗಳಿಂದ ಒಂದಿಷ್ಟು ಮಣ್ಣು ತೆಗೆದುಕೊಂಡಾನ . ಅದು ಮಣ್ಣಿ ನ್ಯಾಗ ನೀರ್ ಹಾಕಿ ಕಲಶ್ಯಾನ.ಅದರಿಂದಲೇ ಗಡಿಗಿ ಮಾಡ್ಯಾನಮತ್ತು ಅದನ್ನು ಗಾಳಿಗಿ ಇಟ್ಟಾನ . ನಂತರ ಒಯ್ದು ಸುಟ್ಟಾನ . ಸುಟ್ಟಿನಿಂದ ಆಕಾಶ ಕೂಡಿಕೊಂಡು ಶಬ್ದ ಹುಟ್ಟದ.ಅದು ಗಡಿಗಿ ಆಗ್ಯದ ಎಲ್ಲಾ ಭಾಗ ಅವರಿಗೆ ಅವರವರಿಗೆ ಹಂಚಿಬಿಟ್ಟರೆ ಗಡಿಗೆಯಲ್ಲಿದೆ ಹಂಗ ಗುರುನಾಥ ಅದನ್ನೆಲ್ಲ ಬಿಡಿಸಿ ಬೈಲು ಮಾಡಿ ನಿಶ್ಚಿಂತೆ ಮಾಡಬೇಕು. ಹೋದರು ಅಳೋದಿಲ್ಲ […]

25 ತತ್ವಗಳು ಅದಾವು. ಇದರಾಗ ಅಪ್ಪು ತೇಜ ವಾಯು ಆಕಾಶ ಇವು ಐದು ಕೂಡಿಕೊಂಡಾವು. ಪಂಚಭೂತಗಳಿಂದ ಒಂದಿಷ್ಟು ಮಣ್ಣು ತೆಗೆದುಕೊಂಡಾನ . ಅದು ಮಣ್ಣಿ ನ್ಯಾಗ ನೀರ್ ಹಾಕಿ ಕಲಶ್ಯಾನ.ಅದರಿಂದಲೇ ಗಡಿಗಿ ಮಾಡ್ಯಾನಮತ್ತು ಅದನ್ನು ಗಾಳಿಗಿ ಇಟ್ಟಾನ . ನಂತರ ಒಯ್ದು ಸುಟ್ಟಾನ . ಸುಟ್ಟಿನಿಂದ ಆಕಾಶ ಕೂಡಿಕೊಂಡು ಶಬ್ದ ಹುಟ್ಟದ.ಅದು ಗಡಿಗಿ ಆಗ್ಯದ ಎಲ್ಲಾ ಭಾಗ ಅವರಿಗೆ ಅವರವರಿಗೆ ಹಂಚಿಬಿಟ್ಟರೆ ಗಡಿಗೆಯಲ್ಲಿದೆ ಹಂಗ ಗುರುನಾಥ ಅದನ್ನೆಲ್ಲ ಬಿಡಿಸಿ ಬೈಲು ಮಾಡಿ ನಿಶ್ಚಿಂತೆ ಮಾಡಬೇಕು. ಹೋದರು ಅಳೋದಿಲ್ಲ ಬಂದ್ರು ಅಳೋದಿಲ್ಲ . ಅದು ಹೋಗೋದು ಹೋಗೋದೇ .. ಕೂದಲು ಕತ್ತರಿಸುವಾಗ ದುಃಖ ಏಕೆ ? ಆ ಕೂದಲು ನಮ್ಮವು ಅಲ್ಲ. ಅಲ್ಲಿ ಹೋಗಿ ರೊಕ್ಕ ಕೊಟ್ಟು ಕೂದಲು ಕತ್ತರಿಸಿಕೊಂಡು ಬರ್ತಿಯಲ್ಲ. ಕೈಗೆ ಏನಾದರೂ ಆದರೆ ಮೊದಲು ಕೈ ಕಡಿರಿ ಅಂತಿದಿ . ಮೊದಲು ನಾವು ಉಳಿದರೆ ಸಾಕು ಅಂತೀರಿ. ಹಿಂಗ ಯಾವವು ನಮ್ಮ ಅಲ್ಲ. ಹೋಗು ಹೋಗುವೆ ಅಂತ ತಿಳಿದುಬಿಟ್ಟರೆ ಅದಕ್ಕೆ ದುಃಖವಿಲ್ಲ ಅದನ್ನು ತಿಳ್ಕೊಂಡ್ರ ಅವನು ಮುಕ್ತ .

ಸಚ್ಚಿದಾನಂದನ ಲಕ್ಷ್ಯ ಸಿಗಬೇಕಾದರೆ ಎಂಥ ಗುರು ಬೇಕು ? ಅವನ ಲಕ್ಷಣಗಳೇನು ?

ಎಲ್ಲರಿಗೂ ಗುರು ಅನ್ನಲಿಕ್ಕೆ ಬರುವುದಿಲ್ಲ ಸಚ್ಚಿದಾನಂದ ಅಂದ್ರೆ ಸತ್ ಚಿತ್ ಆನಂದ.ನಿತ್ಯ ಪೂರ್ಣ ಈ 5 ಲಕ್ಷಣಗಳಿಂದ ಕೂಡಿದವನಾಗಿರಬೇಕು. ಸತ್ಯ ಅಸತ್ಯ ಗಳ ಅರಿವು ಆತನಿಗೆ ಇರಬೇಕು ಚಿತ್ತು ಬೇರೆ ಬೇರೆ ಕಡೆ ಹರಿಯಬಾರದು ಯಾವಾಗಲೂ ಆನಂದದೊಳಗಿರಬೇಕು. ಸುಖ ದುಃಖ ಯಾವುದೇ ಇರಲಿ ನೋವು ನಲಿವುಗಳೇ ಇರಲಿ ಯಾವುದಕ್ಕೂ ಒಳಗಾಗದೆ ಸದಾ ಸಂತಸದಿಂದ ಇರಬೇಕು.

ಸತ್ ಚಿತ್ ಆನಂದ ನಿತ್ಯ ಪೂರ್ಣ . ನಿತ್ಯ ಪೂರ್ಣ ಯಾವುದು ? ಚೈತನ್ಯ ಆತ್ಮ. ಆತ್ಮ ಸತ್ತಿಲ್ಲ ಹುಟ್ಟಿಲ್ಲ. ನಾನು ಚಿದಾನಂದ . ಆತ್ಮನೇ ನಾನಿದ್ದೀನಿ ಈ ದೇಹವು ನಾನಲ್ಲ. ಯಾರು ದೇಹವನ್ನು ಮರೆತಿರುತ್ತಾನೋ ಆತನೇ ಚಿದಾನಂದ .

ನಿರ್ವಾಣ ಷಟ್ಕಂ-

ಮನೋಬುದ್ಧಿಯಹಂಕಾರ ಚಿತ್ತಾ ನಿನಾಹಂ ,
ನ ಚ ಶ್ರೋತ್ರಜಿಹ್ವೇ ನ ಚ ಘ್ರಾಣ ನೇತ್ರೇ
ನ ಚ ವ್ಯೋಮ ಭೂಮಿರ್ನ ತೇಜೋ ನ ವಾಯುಃ
ಚಿದಾನಂದ ರೂಪಃ ಶಿವೋಹಂ ಶಿವೋಹಂ II ಪ II

ಅರ್ಥ –
ಮನಸ್ಸು ನಾನಲ್ಲ ,ಬುದ್ಧಿ ನಾನಲ್ಲ ,ಚಿತ್ತ ನಾನಲ್ಲ, ಅಹಂಕಾರ ನಾನಲ್ಲ, ನಾನು ಅನ್ನೋದು ಅಲ್ಲ, ಚರ್ಮ ನಾನಲ್ಲ, ಘ್ರಾಣ ನಾನಲ್ಲ , ಕಿವಿಯೂ ನಾನಲ್ಲ, ನಾಲಿಗೆಯು ನಾನಲ್ಲ ,ಪ್ರಾಣ ವಾಯು ನಾನಲ್ಲ ,ಭೂಮಿಯು ನಾನಲ್ಲ, ಆಕಾಶವು ನಾನಲ್ಲ, ಅಗ್ನಿಯು ನಾನಲ್ಲ ,ವಾಯು ನಾನಲ್ಲ, ಅಂದರೆ ನಾನ್ಯಾರು? ನಾನು ಮಂಗಳಕರನಾದ ಚಿದಾನಂದ ಅಂದ್ರೆ ಸಾಕ್ಷಾತ್ ಶಿವನ ರೂಪವು ನಾನು.

ಮುಂದುವರಿಯುತ್ತದೆ ….

ನಾಳಿನ ಸಂಚಿಕೆಯಲ್ಲಿ ಮತ್ತೆ ಭೇಟಿಯಾಗೋಣ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.