ನಾಡಹಬ್ಬ ದಸರಾ ಸಂದರ್ಭದಲ್ಲಿ ನಿರ್ಮಾಪಕ ಸಂದೇಶ್ ನಾಗರಾಜ್ ಕುಟುಂಬದವರಿಂದ ಮಾವುತರಿಗೆ ಭೋಜನಕೂಟ .
ಮೈಸೂರು ನಾಡಹಬ್ಬ ದಸರಾದ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯುತ್ತಿದೆ. ವಿಶ್ವವಿಖ್ಯಾತ ವಿಜಯ ದಶಮಿ ಜಂಬೂಸವಾರಿಗೆ ದಿನಗಣನೆ ಆರಂಭವಾಗಿದೆ. ಈ ಸುಂದರ ಉತ್ಸವಕ್ಕೆ ಈಗಾಗಲೇ ಗಜಪಡೆಯ ಆಗಮನವಾಗಿದೆ. ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕರು ಹಾಗೂ ಮೈಸೂರಿನವರೂ ಅಗಿರುವ ಸಂದೇಶ್ ನಾಗರಾಜ್ ಕುಟುಂಬದವರು ಪ್ರತಿವರ್ಷ ಮಾವುತರಿಗೆ ಭೋಜನಕೂಟ ಏರ್ಪಡಿಸಿಕೊಂಡು ಬಂದಿದ್ದಾರೆ. ಪ್ರತಿವರ್ಷದಂತೆ ಈ ವರ್ಷ ಸಹ ನಮ್ಮ ತಂದೆ ಸಂದೇಶ್ ನಾಗರಾಜ್ ಅವರ ಮಾರ್ಗದರ್ಶನದಂತರ ಮಾವುತರು ಹಾಗೂ ಅವರ ಕುಟುಂಬದವರಿಗೆ ಮೈಸೂರು ಅರಮನೆ ಆವರಣದಲ್ಲಿ ಭೋಜನಕೂಟ ಆಯೋಜಿಸಿದ್ದೆವು ಎಂದು ಸಂದೇಶ್ ನಾಗರಾಜ್ ಅವರ ಪುತ್ರ ಸಂದೇಶ್ ತಿಳಿಸಿದ್ದಾರೆ.
