ಅಕ್ಟೋಬರ್ 30ಕ್ಕೆ
“ರಿಲ್ಯಾಕ್ಸ್ ಆಗಿ” ರಿಲೀಸ್
ಕೋಮಲ್ ಕುಮಾರ್ ಮಾತಲ್ಲಿ ತುಂಬಾ ಅರ್ಥವಿತ್ತು.
ರಿಲ್ಯಾಕ್ಸ್ ಸಿನ್ಮಾನ ಥಿಯೇಟರ್ ನಲ್ಲಿ ನೋಡ್ತಿರೋ ಅಥವಾ ಬೇರೆ ಎಲ್ಲೀ ನೋಡ್ತೀರೋ ಗೊತ್ತಿಲ್ಲ, ಆದರೆ ನನಗೆ ನನ್ನ ಅಭಿಮಾನಿಗಳ ಮೇಲೆ ನಂಬಿಕೆ ಇದೆ, ನೂರಕ್ಕೆ ನೂರರಷ್ಟು ನಮ್ಮ ರಿಲ್ಯಾಕ್ಸ್ ಸಿನಿಮಾ ನೋಡಿದ ನಂತರ ಎಲ್ಲರೂ ರಿಲ್ಯಾಕ್ಸ್ ಆಗುತ್ತಾರೆ.
ರೋಲೆಕ್ಸ್ ನಲ್ಲಿ ನಾಲ್ಕು ತರಹದ ಬ್ರಾಂಡ್ ಇರುತ್ತವೆ, ಒರಿಜಿನಲ್ ರೋಲೆಕ್ಸ್, ಮಾಸ್ಟರ್ ಪೀಸ್ ರೋಲೆಕ್ಸ್, ಫಸ್ಟ್ ಕಾಪಿ ರೋಲೆಕ್ಸ್ ಮತ್ತು ಚಿತ್ರಾನ್ನ ರೋಲೆಕ್ಸ್. ರೋಲೆಕ್ಸ್ ಅನ್ನೋ ಬ್ರಾಂಡ್ ಯಾವತ್ತೂ ದೊಡ್ಡದೇ.
ರೋಲೆಕ್ಸ್ ಟೈಟಲ್ “ರಿಲ್ಯಾಕ್ಸ್ ಆಗಿ” ಆಗಿದ್ದರ ಬಗ್ಗೆ ಮಾತನಾಡಿದ ಕೋಮಲ್ ಕುಮಾರ್, ನಾನು ಚಿತ್ರದ ನಿರ್ದೇಶಕರಿಗೆ ಮೊದಲೇ ಹೇಳಿದ್ದೆ, ಮುಂದಿನ ದಿನಗಳಲ್ಲಿ ಖಂಡಿತ ಟೈಟಲ್ ವಿಚಾರ ಬರಬಹುದು ಎಂದು, ಯಾಕೆಂದರೆ ಸಾಮಾನ್ಯವಾಗಿ ಕೆಲವು ಬ್ರಾಂಡ್ ಗಳ ಟೈಟಲ್ ಅನ್ನ ನಾವು ಯಾರು ಉಪಯೋಗಿಸಕೂಡದು,ಅದು ತಪ್ಪಾಗುತ್ತದೆ. ಬ್ರಾಂಡ್ ಹೆಸರನ್ನು ಕೆಲವು ಜನ ನಕಲಿಯಾಗಿ ದುರುಪಯೋಗ ಮಾಡುತ್ತಾರೆ ಆದರೆ ನಮ್ಮ ಚಿತ್ರ ರೋಲೆಕ್ಸ್ ಆಗಿಯೇ ಮುಂದುವರೆದಿದ್ದರೂ ಸಹ ನಮ್ಮಿಂದ ಆ ಬ್ರಾಂಡಿಗೆ ಯಾವುದೇ ತೊಂದರೆಯಾಗುತ್ತಿರಲಿಲ್ಲ ನಮ್ಮದು ಶುದ್ಧ ಕಂಟೆಂಟ್.
ಸುಮಾರು 25 ವರ್ಷದ ಹಿಂದೆ ನಾನು ಮಾಡಿದ ಸಿನಿಮಾದಲ್ಲಿನ ಪಾತ್ರಗಳು, ಆ ಸಂಭಾಷಣೆಗಳು ಇವತ್ತಿಗೆ ಟ್ರೆಂಡಿಂಗ್ ನಲ್ಲಿ ಓಡುತ್ತಿವೆ, ಆಗಲೇ ನಾನು ನನ್ನ ಪಾತ್ರದ ಮೂಲಕ ಹೊಸ ತರಹದ ಹಾಸ್ಯವನ್ನು ಮಾಡುತ್ತಿದ್ದೆ.
ನಿರ್ದೇಶಕರು ಕೊಟ್ಟ ದೃಶ್ಯದ ಪೇಪರಲ್ಲಿ ಒಂದಷ್ಟು ನನ್ನದೇ ಸ್ವಂತ ಅನುಭವದ ಹಾಸ್ಯವನ್ನು ಸೇರಿಸಿದಾಗ ಅದು ತುಂಬಾ ಚೆನ್ನಾಗಿ ವರ್ಕ್ ಔಟ್ ಆಗಿದ್ದುಂಟು ಹಾಗೂ ಎಲ್ಲರನ್ನ ನಗೆಗಡಲಲ್ಲಿ ತೇಲಿಸಿದ್ದು ಉಂಟು,ಎಂಬ ಕೆಲವು ಸಿನಿಮಾಗಳ ಹೆಸರು ಮತ್ತು ಉದಾಹರಣೆಗಳೊಂದಿಗೆ ಮಾತನಾಡಿದ ಕೋಮಲ್ ಕುಮಾರ್,ರಿಲ್ಯಾಕ್ಸ್ ಅನ್ನೋ ಚಿತ್ರ ಖಂಡಿತವಾಗಿಯೂ ಎಲ್ಲ ಅಭಿಮಾನಿ ದೇವರುಗಳಿಗೆ ಇಷ್ಟವಾಗಲಿದೆ ಎಂಬ ಭರವಸೆಯ ಮಾತುಗಳನ್ನು ಆಡಿದರು.
ನಿರ್ಮಾಪಕ ಅಂಬಟಿ ಮಧು ಮೋಹನ್ ಕೃಷ್ಣ ಹೇಳಿದ್ದಿಷ್ಟು,
ನಾನು,ನಾಯಕ ಕೋಮಲ್ ಕುಮಾರ್ ದೊಡ್ಡ ಅಭಿಮಾನಿ,ಅವ್ರ ನಟನೆ, ಫೈಟ್ಸ್ ಎಲ್ಲವೂ ಸಖತ್ ನಮ್ಮ ಆಂಧ್ರ ಪ್ರದೇಶದಲ್ಲಿ ಸಹ ಅವ್ರಿಗೆ ದೊಡ್ಡ ಫ್ಯಾನ್ ಬಳಗ ಇದೆ,ಹಾಗೆ ಸೋನಲ್ ಕೂಡಾ ಅದ್ಭುತ ನಟಿ,”ರಿಲ್ಯಾಕ್ಸ್ ಆಗಿ” ಒಂದೊಳ್ಳೆ ಚಿತ್ರ ಆಗೋದ್ರಲ್ಲಿ ಸಂಶಯ ಇಲ್ಲ ಎಂದರು.
ನಾನೊಬ್ಬ ಕಲಾವಿದ, ನಿರ್ಮಾಪಕ ಆಗಿ ಸಿನಿಮಾವನ್ನು ಪ್ರೀತಿಸ್ತೀನಿ ಹಾಗೆ ಕೋಮಲ್ ಬಗ್ಗೆ ನಾನು ಹೇಳಬೇಕಾದ ಮತ್ತೊಂದು ವಿಷ್ಯ ಅಂದ್ರೆ,ನನ್ನ ಕಾರ್ ಚಾಲಕ ತಪ್ಪದೇ ಕೋಮಲ್ ಅವ್ರ ಹಾಡನ್ನು ಪ್ಲೇ ಮಾಡ್ತಾ ಎಂಜಾಯ್ ಮಾಡ್ತಾನೆ,ಮೇಲಾಗಿ ರೋಲೆಕ್ಸ್ ಅನ್ನೋ ಟೈಟಲ್ ಬದಲಾವಣೆ ಮಾಡಿದ್ದಕ್ಕೆ ಸ್ಪಷ್ಟ ಕಾರಣ ಕೊಟ್ಟು ಯಾಕೆ ರೋಲೆಕ್ಸ್ “ರಿಲ್ಯಾಕ್ಸ್ ಆಗಿ” ಆಯ್ತು ಅಂತಾ ತಿಳಿಸಿದರು.
ನಾನ್ಯಾಕೆ ಕೋಮಲ್ ಅವರನ್ನೇ ನಾಯಕ ನಟನನ್ನಾಗಿ ಆಯ್ಕೆ ಮಾಡಿದ್ದು ಅಂದ್ರೆ,ಕೋಮಲ್ ತುಂಬಾ ಒಳ್ಳೆಯ ಮನುಷ್ಯ,ಇಂಥವರ ಜೊತೆ ನಾವು ಕೊಲ್ಯಾಬ್ ಆಗಿದ್ದು ಹೆಮ್ಮೆ ಅನ್ನಿಸ್ತಿದೆ ಎಂದರು.
ನಾಯಕಿ ಸೋನಲ್
ಮಾತನಾಡಿ,ತುಂಬ ವರ್ಷದಿಂದ ಒಳ್ಳೆಯ ಪಾತ್ರಕ್ಕಾಗಿ ಕಾಯ್ತಾ ಇರುವ ನನ್ನಂತಹ ನಟಿಯರಿಗೆ “ರಿಲ್ಯಾಕ್ಸ್ ಆಗಿ” ಒಳ್ಳೇ ಸಿನ್ಮಾ ಆಗುತ್ತೆ ಹಾಗೆ ನಿರ್ಮಾಪಕರ ಬಗ್ಗೆ ಮಾತನಾಡಿದ ಸೋನಲ್
,ಆಂಧ್ರದಲ್ಲಿಯೂ ಸಹ ನಿರ್ಮಾಪಕರು ನಮ್ಮ ಕನ್ನಡ ಭಾಷೆ ಬಗ್ಗೆ ಮಾತಾಡೋರು ಅದು ಒಬ್ಬ ತೆಲುಗು ನಿರ್ಮಾಪಕನಾಗಿ,ಅಷ್ಟೇ ಅಲ್ಲದೆ
ಕೋಮಲ್ ಕುಮಾರ್ ಎಂತಹ ಎನರ್ಜಿ ಇರೋ ನಟ ಅಂದ್ರೆ,ನಮಗೆಲ್ಲ ಸದಾ ಪ್ರೇರಣೆ ಕೊಡುವ ನಟ,ಡಾನ್ಸ್ ಬರಲ್ಲ ಅಂತಾರೆ ಆದರೆ ಅವರೊಬ್ಬ ಬ್ರಿಲಿಯಂಟ್ ಆಕ್ಟರ್,ನಿಜ ಜೀವನದಲ್ಲಿ ನಾನು ತುಂಬಾ ಒಳ್ಳೇ ಹುಡುಗಿ ಮನೆಯ ಎಲ್ಲ ಕೆಲಸ ಮಾಡ್ತೀನಿ ಬೇಕಾದ್ರೆ ತರುಣ್ ಗೆ ಕೇಳಿ ಎಂದು ತಮಾಷೆ ಮಾಡಿದ್ರು.
ಆದರೆ “ರಿಲ್ಯಾಕ್ಸ್ ಆಗಿ” ಸಿನಿಮಾದಲ್ಲಿ ಮಾತ್ರ ನನ್ನದು ತುಂಬಾ ನಿಜ ಜೀವನಕ್ಕೆ ವಿರುದ್ಧ ಪಾತ್ರ ಎಂದರು.
ಬಿಲ್ ಗೇಟ್ಸ್ ಸಿನ್ಮಾ ಖ್ಯಾತಿಯ ನಿರ್ದೇಶಕ ಶ್ರೀನಿವಾಸ ಮಂಡ್ಯ,ತಮ್ಮ ಹೊಸ ಚಿತ್ರ ರಿಲ್ಯಾಕ್ಸ್ ಯಾಕೆ ವಿಶೇಷ ಅನ್ನೋದು ಹೇಳಿದ್ದಲ್ಲದೆ, ಕೋಮಲ್ ಕುಮಾರ್, ಸೋನಲ್ ಮತ್ತು ವಿನೋದ್ ಪ್ರಭಾಕರ್ ಸೇರಿದಂತೆ ಇನ್ನೂ ಹಲವು ಪಾತ್ರಗಳು ಇವೆ ಎಂದರು,ಸಂಗೀತ ನಿರ್ದೇಶಕ ಜೆಸ್ಸಿ ಗಿಫ್ಟ್ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, ಜೆಸ್ಸಿ ಎಂತಹ ಲೆಜೆಂಡರಿ ತಂತ್ರಜ್ಞ ಅನ್ನೋದು ವಿವರಿಸಿದರು.

“ರಿಲ್ಯಾಕ್ಸ್ ಆಗಿ” ಚಿತ್ರವನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡು ಸಾಗಿದ್ದು,ಕೋಮಲ್ ಮತ್ತು ಸೋನಲ್ ಇದರಲ್ಲಿ ಯಾವುದೇ ಡೌಟ್ ಇಲ್ಲ,ಎಲ್ಲಿಯೂ ಸಿನಿಮಾ ಕೆಲಸಕ್ಕೆ ಕಾಂಪ್ರಮೈಸ್ ಆಗದೆ ನ್ಯಾಯ ಸಲ್ಲಿಸಿ ಸಿನ್ಮಾ ಮಾಡಿದ್ದೇನೆ.ಸಿನಿಮಾದ ಕಥೆ ರಿಲ್ಯಾಕ್ಸ್ ಆಗಿ ಮೂವ್ ಆಗೋದ್ರಿಂದ ಅಭಿಮಾನಿಗಳು ಚಿತ್ರ ನೋಡಿದ ನಂತರ ಫುಲ್ ರಿಲ್ಯಾಕ್ಸ್ ಆಗ್ತಾರೆ ಅನ್ನೋ ನಂಬಿಕೆ ಇದೇ,ಅಕ್ಟೋಬರ್ 30ಕ್ಕೆ ರಿಲೀಸ್ ಆಗ್ತಾ ಇದೆ,ಸಪೋರ್ಟ್ ಮಾಡಿ ಎಂದರು.
ನೃತ್ಯ ನಿರ್ದೇಶಕ,ಮುರಳಿ ಮಾಸ್ಟರ್ ಮಾತನಾಡಿ,ನನ್ನ ವೃತ್ತಿ ಜೀವನದಲ್ಲಿ ಕೋಮಲ್ ಕುಮಾರ್ ಅವ್ರಿಗೆ ಮೊದಲ ಸ್ಥಾನ,ಯಾಕೆಂದರೆ ನಾನು ಮಾಡಿದ ಬಹಳಷ್ಟು ಪ್ರಾಜೆಕ್ಟ್ ಗಳು ತುಂಬಾ ಚೆನ್ನಾಗ್ ಆಗೋದಕ್ಕೆ ಕಥೆ ನಿರ್ದೇಶಕರು ನಿರ್ಮಾಪಕರು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ನಾಯಕ – ನಾಯಕಿ,ಕೋಮಲ್ ಅವರಿಗೆ ಯಾವುದೇ ರಿಹರ್ಸಲ್ ಆಗಲಿ ಅಥವಾ ಅಭ್ಯಾಸ ಆಗಲಿ ಇಲ್ಲವೇ ಇಲ್ಲ,ಡೈರೆಕ್ಟ್ ಆಗಿ ಸ್ಪಾಟ್ ಗೆ ಬಂದಾಗಲೇ ಡಾನ್ಸ್ ಶೂಟಿಂಗ್ ಶುರು ಆಗತ್ತೆ ಹಾಗೆ ಸೋನಲ್ ಪ್ರತಿ frem ನಲ್ಲಿಯೂ ಸೂಪರ್,ಅವ್ರು ಒಳ್ಳೇ ಡ್ಯಾನ್ಸರ್ ಎಂದು ಹೇಳಿದ್ದಲ್ಲದೆ,ತಮ್ಮ ಜೊತೆ ವೇದಿಕೆ ಮೇಲಿದ್ದ ತಮ್ಮ ತಂಡದ ಜೊತೆಗೆ ಭರ್ಜರಿ ಸ್ಟೆಪ್ ಹಾಕಿ ಎಲ್ಲರನ್ನೂ ರಂಜಿಸಿದ್ದು ವಿಶೇಷ ಆಗಿತ್ತು.
ರವೀ ಸಾಸನೂರ್
MasterNews365.Com

