Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • *ಸಂಭ್ರಮದ* ರುಚಿ “ಸದಾ” ಒಂದೇ
- ವಿಶೇಷ ಸಮಾಚಾರ

*ಸಂಭ್ರಮದ* ರುಚಿ “ಸದಾ” ಒಂದೇ

ಸಿಹಿಕಹಿ ಚಂದ್ರು ನಿರ್ದೇಶನದಲ್ಲಿ ಮೂಡಿಬಂದಿರುವ ‘ಸಂಭ್ರಮದ ರುಚಿ ಒಂದೇ’ ಹಾಡಿನಲ್ಲಿ ಚಂದನವನದ ತಾರೆಯರು ‘ ವಿವಿಧತೆಯಲ್ಲಿ ಏಕತೆ ಸಾರುವ ಈ ಅಲ್ಬಮ್ ಸಾಂಗ್ ಅನ್ನು ‘ಇಂಡಿಯಾ ಸ್ವೀಟ್ ಹೌಸ್’ ಪ್ರಸ್ತುತ ಪಡಿಸಿದೆ’ ಸಿಹಿಕಹಿ ಚಂದ್ರು ನಿರ್ದೇಶನ ಮತ್ತು ‘ಇಂಡಿಯಾ ಸ್ವೀಟ್ ಹೌಸ್’ ಪ್ರಸ್ತುತ ಪಡಿಸಿರುವ ‘ಸಂಭ್ರಮದ ರುಚಿ ಒಂದೇ’ ಎಂಬ ಅಲ್ಬಮ್ ಸಾಂಗ್ ಇತ್ತೀಚೆಗೆ ಬಿಡುಗಡೆ ಆಗಿದೆ. ಭಾರತದ ವೈವಿಧ್ಯಮಯ ಭಾಷೆ, ಸಂಸ್ಕೃತಿ, ಸಂಪ್ರದಾಯವನ್ನು ಸಿಹಿಯ ಮ‌ೂಲಕ ಬೆಸೆಯುವ ವಿಶಿಷ್ಟ ಪ್ರಯತ್ನವಾಗಿ ಈ ಹಾಡು ಮೂಡಿ ಬಂದಿದೆ. […]

ಸಿಹಿಕಹಿ ಚಂದ್ರು ನಿರ್ದೇಶನದಲ್ಲಿ ಮೂಡಿಬಂದಿರುವ ‘ಸಂಭ್ರಮದ ರುಚಿ ಒಂದೇ’ ಹಾಡಿನಲ್ಲಿ ಚಂದನವನದ ತಾರೆಯರು ‘

ವಿವಿಧತೆಯಲ್ಲಿ ಏಕತೆ ಸಾರುವ ಈ ಅಲ್ಬಮ್ ಸಾಂಗ್ ಅನ್ನು ‘ಇಂಡಿಯಾ ಸ್ವೀಟ್ ಹೌಸ್’ ಪ್ರಸ್ತುತ ಪಡಿಸಿದೆ’

ಸಿಹಿಕಹಿ ಚಂದ್ರು ನಿರ್ದೇಶನ ಮತ್ತು ‘ಇಂಡಿಯಾ ಸ್ವೀಟ್ ಹೌಸ್’ ಪ್ರಸ್ತುತ ಪಡಿಸಿರುವ ‘ಸಂಭ್ರಮದ ರುಚಿ ಒಂದೇ’ ಎಂಬ ಅಲ್ಬಮ್ ಸಾಂಗ್ ಇತ್ತೀಚೆಗೆ ಬಿಡುಗಡೆ ಆಗಿದೆ. ಭಾರತದ ವೈವಿಧ್ಯಮಯ ಭಾಷೆ, ಸಂಸ್ಕೃತಿ, ಸಂಪ್ರದಾಯವನ್ನು ಸಿಹಿಯ ಮ‌ೂಲಕ ಬೆಸೆಯುವ ವಿಶಿಷ್ಟ ಪ್ರಯತ್ನವಾಗಿ ಈ ಹಾಡು ಮೂಡಿ ಬಂದಿದೆ. ಭಾರತದ ಸಾಂಸ್ಕೃತಿಕ ವೈವಿದ್ಯಮಯ ಹಬ್ಬಗಳ ಸಂಭ್ರಮ ಮತ್ತು ಸಿಹಿ ಹಂಚಿಕೊಳ್ಳುವ ಸಂತೋಷವನ್ನು ಈ ಹಾಡಿನಲ್ಲಿ ಬಹು ಭಾಷೆಯಲ್ಲಿ ಚಿತ್ರೀಕರಿಸಲಾಗಿದೆ. ಇತ್ತೀಚೆಗೆ ನಡೆದ ಈ ಹಾಡಿನ ಅದ್ದೂರಿ ಬಿಡುಗಡೆ ಕಾರ್ಯಕ್ರಮದಲ್ಲಿ ನಿರ್ದೇಶಕ ಸಿಹಿಕಹಿ ಚಂದ್ರು ಮಾತನಾಡಿ, ‘ಹಾಡಿನ ಸಾಲುಗಳು ಉತ್ತಮವಾಗಿ ಮೂಡಿ ಬಂದಿವೇ. ಎಲ್ಲಾ ಭಾರತೀಯರ ಸಂಸ್ಕೃತಿ ಬೇರೆ ಬೇರೆ ಆಗಿದ್ದರೂ ಎಲ್ಲದಕ್ಕೂ ಸಿಹಿ ಒಂದೆ. ವಿವಿದತೆಯಲ್ಲಿ ಏಕತೆ ತುಂಬುವ ಹಾಡು ಇದಾಗಿದೆ. ಇದಕ್ಕೆ ಪ್ರವೀಣ್ ಡಿ ರಾವ್ ಅದ್ಭುತವಾಗಿ ಸಂಗೀತ ನೀಡಿದರು. ಕವಿರಾಜ್ ಸುಂದರವಾದ ಸಾಹಿತ್ಯ ಬರೆದಿದ್ದಾರೆ. ಶ್ವೇತಾ ರಾಜಶೇಖರ್, ವಿಶ್ವನಾಥ ಮೂರ್ತಿ ಹಾಗೂ ನಾನು ಈ ಹಾಡನ್ನು ಮಾಡಿದ್ದೇವೆ. ಇದು ಬೇರೆ ಬೇರೆ ಭಾಷೆಯಲ್ಲಿ ರಿಲೀಸ್ ಆಗಲಿದೆ. ಈ ಗೀತೆಗೆ ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಧನು ಕುಮಾರ್ ನೃತ್ಯ, ಸುರೇಶ್ ಅರಸ ಸಂಕಲನವಿದೆ. ಹಿರಿಯ ನಟ ಶ್ರೀನಾಥ್, ಮುಖ್ಯಮಂತ್ರಿ ಚಂದ್ರು, ರವಿಶಂಕರ್, ಸುಧಾರಾಣಿ ಮತ್ತು ಪರಿಸರವಾದಿ ವಿದುಷಿ ರೇವತಿ ಕಾಮತ್ ಸೇರಿದಂತೆ ಹಲವು ಗಣ್ಯರು ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ಇದನ್ನು ನಾವೆಲ್ಲಾ ಒಂದು ತಂಡವಾಗಿ ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು.

ಇಂಡಿಯಾ ಸ್ವೀಟ್ ಹೌಸ್ ನ ಮುಖ್ಯಸ್ಥ ವಿಶ್ವನಾಥ್ ಮೂರ್ತಿ, ‘ಇಂತಹ ಪ್ರಯತ್ನವನ್ನು ನಾವು ಮಾಡಿರಲಿಲ್ಲ. ಶೂಟಿಂಗ್ ಸಂದರ್ಭದಲ್ಲಿ ಮೂರು ದಿನ ಸಿಹಿಕಹಿ ಚಂದ್ರು ಅವರ ಜೊತೆ ಇದ್ದದ್ದೆ ಖುಷಿಯಾಗಿದೆ’ ಎಂದರು. ನಂತರ ಭರತನಾಟ್ಯ ಕಲಾವಿದೆ ಹಾಗೂ ಇಂಡಿಯಾ ಸ್ವೀಟ್ ಹೌಸ್ ನ ಪಾಲುದಾರರಾದ ಶ್ವೇತಾ ರಾಜಶೇಖರ್ ಮಾತನಾಡಿ, ‘ನಾವು ಯಾವಾಗಲೂ ಜನರ ಮನಸಲ್ಲಿ ಇರಬೇಕು ಎಂದು ಯೋಚನೆ ಮಾಡಿದಾಗ ಒಂದು ಹಾಡಿನ ಮೂಲಕ ಪ್ರಯತ್ನ
ಮಾಡಿದರೆ ಹೇಗೆ ಎಂಬ ಯೋಚನೆ ಬಂತು. ನಂತರ ಎಲ್ಲರಿಗೂ ಕನೆಕ್ಟ್ ಆಗುವ ರೀತಿಯಲ್ಲಿ ಹಲವು ಭಾಷೆ, ಸಂಸ್ಕೃತಿ, ಸಂಪ್ರದಾಯ ಇಟ್ಟುಕೊಂಡು ಈ ಪ್ರಯತ್ನ ಮಾಡಿದ್ದೇವೆ. ಈ ಗೀತೆಯನ್ನು ಇಂಡಿಯಾ ಸ್ವೀಟ್ ಹೌಸ್ ಯೂಟ್ಯೂಬ್ ಚಾನೆಲ್ ನಲ್ಲಿ ನೋಡಬಹುದು. ನಾವಿದನ್ನು ಜಾಹೀರಾತುಗಾಗಿ ಮಾಡಿಲ್ಲ. ಪ್ರತಿ ಹಬ್ಬದಲ್ಲೂ ಸಂಭ್ರಮಿಸಲು ಮಾಡಿದ್ದೇವೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಾಜರಿದ್ದ ನಟಿ ಸುಧಾರಾಣಿ ಅವರು ಮಾತನಾಡಿ, ‘ಇದು ಶ್ವೇತಾ ಅವರ ಆಲೋಚನೆ ಅಂತೆ. ಸ್ವೀಟ್ ಗೆ ಇತರ ಪ್ರಯತ್ನ ಮಾಡಿರೋದು ಹೊಸದು. ಇದರಲ್ಲಿ ನಾನು ಒಂದು ಪಾರ್ಟ್ ಆಗಿದ್ದು ಖುಷಿ ಇದೆ’ ಎಂದರು. ವೇದಿಕೆಯಲ್ಲಿ ಸಾಹಿತಿ ಕವಿರಾಜ್, ಸಂಗೀತ ನಿರ್ದೇಶಕ ಪ್ರವೀಣ್ ಡಿ. ರಾವ್, ಛಾಯಾಗ್ರಹಕ ಅದ್ವೈತ್ ಗುರುಮೂರ್ತಿ ಹಾಗೂ ಇಂಡಿಯಾ ಸ್ವೀಟ್ ಹೌಸ್ ನ ರಾಜೇಶ್ ಮೆಹ್ತಾ ತಮ್ಮ ಅನುಭವ ಹಂಚಿಕೊಂಡರು. ಈ ಗೀತೆಯನ್ನು ನಕುಲ್ ಅಭಯಂಕರ್, ಅಂಕಿತಾ ಕುಂಡು, ವಾರಿಜಾಶ್ರೀ, ಫಯಾಜ್ ಖಾನ್ ಮತ್ತು ದೀಪ್ತಿ ಭಟ್ ಹಾಡಿದ್ದಾರೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.