Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಟೊರೊಂಟೊ ಚಲನಚಿತ್ರೋತ್ಸವದಲ್ಲಿ “ಮಹಿಮಾ”
- ಸಿನಿಮಾ

ಟೊರೊಂಟೊ ಚಲನಚಿತ್ರೋತ್ಸವದಲ್ಲಿ “ಮಹಿಮಾ”

ಹೆಸರಾಂತ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (IFFSA Toronto) ಕನ್ನಡದ “ಮಹಿಮಾ” ಚಿತ್ರ ಆಯ್ಕೆ . ಅಕ್ಟೋಬರ್ 17 ರಂದು ಗ್ರ್ಯಾಂಡ್ ಪ್ರೀಮಿಯರ್ . ಕೃಷ್ಣ ಕ್ರಿಯೇಷನ್ಸ್ ಅರ್ಪಿಸಿರುವ, ಡ್ರೀಮ್ಸ್ ಮೀಡಿಯಾ ಕೆನಡಾ ಸಂಸ್ಥೆ ಲಾಂಛನದಲ್ಲಿ ಕಿರಣ್ ಭಾರ್ತೂರ್, ವೀಣಾ ಭಾರ್ತೂರ್ ಹಾಗೂ ನವೀನ್ ಕುಮಾರ್ ಅವರು ನಿರ್ಮಿಸಿರುವ, ಗೋಕುಲ ಎಂಟರ್ ಟೈನರ್ಸ್ ಸಂಸ್ಥೆಯ ಗೋವಿಂದರಾಜು ಹಾಗೂ ಶಶಿಧರ್ ರೆಡ್ಡಿ ಅವರ ಸಹ ನಿರ್ಮಾಣವಿರುವ ಹಾಗೂ ನವೀನ್ ಕುಮಾರ್ ಅವರು ನಿರ್ದೇಶಿಸಿರುವ “ಮಹಿಮಾ” ಕನ್ನಡ ಚಿತ್ರ ಉತ್ತರ ಅಮೆರಿಕಾದಲ್ಲೇ […]

ಹೆಸರಾಂತ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ (IFFSA Toronto) ಕನ್ನಡದ “ಮಹಿಮಾ” ಚಿತ್ರ ಆಯ್ಕೆ .

ಅಕ್ಟೋಬರ್ 17 ರಂದು ಗ್ರ್ಯಾಂಡ್ ಪ್ರೀಮಿಯರ್ .

ಕೃಷ್ಣ ಕ್ರಿಯೇಷನ್ಸ್ ಅರ್ಪಿಸಿರುವ, ಡ್ರೀಮ್ಸ್ ಮೀಡಿಯಾ ಕೆನಡಾ ಸಂಸ್ಥೆ ಲಾಂಛನದಲ್ಲಿ ಕಿರಣ್ ಭಾರ್ತೂರ್, ವೀಣಾ ಭಾರ್ತೂರ್ ಹಾಗೂ ನವೀನ್ ಕುಮಾರ್ ಅವರು ನಿರ್ಮಿಸಿರುವ, ಗೋಕುಲ ಎಂಟರ್ ಟೈನರ್ಸ್ ಸಂಸ್ಥೆಯ ಗೋವಿಂದರಾಜು ಹಾಗೂ ಶಶಿಧರ್ ರೆಡ್ಡಿ ಅವರ ಸಹ ನಿರ್ಮಾಣವಿರುವ ಹಾಗೂ ನವೀನ್ ಕುಮಾರ್ ಅವರು ನಿರ್ದೇಶಿಸಿರುವ “ಮಹಿಮಾ” ಕನ್ನಡ ಚಿತ್ರ ಉತ್ತರ ಅಮೆರಿಕಾದಲ್ಲೇ ಬಹು ದೊಡ್ಡ ಚಲನಚಿತ್ರೋತ್ಸವವೆಂದು ಖ್ಯಾತಿ ಪಡೆದಿರುವ ಹಾಗೂ ಸೌತ್ ಏಷ್ಯಾದ ಎಲ್ಲಾ ಭಾಷೆಗಳ ಚಿತ್ರಗಳು ಪ್ರದರ್ಶನವಾಗುವ ಪ್ರತಿಷ್ಠಿತ ಟೊರಾಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ(IFFSA Toronto)ಕ್ಕೆ ಆಯ್ಕೆಯಾಗಿದೆ. ಅಕ್ಟೋಬರ್ 17 ರಂದು ಈ ಚಿತ್ರದ ಗ್ರ್ಯಾಂಡ್ ಪ್ರೀಮಿಯರ್ ಆಗಲಿದೆ. ಇದಕ್ಕೂ ಮುನ್ನ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ಇತ್ತೀಚಿಗೆ ನಡೆದ ಅಕ್ಕ ಸಮ್ಮೇಳನದಲ್ಲೂ “ಮಹಿಮಾ” ಚಿತ್ರ ಪ್ರದರ್ಶನಗೊಂಡು ಮೆಚ್ಚುಗೆ ಪಡೆದುಕೊಂಡಿದೆ‌.

ನಿರ್ಮಾಪಕ ಕಿರಣ್ ಭಾರ್ತೂರ್ ಅವರು ಟೊರಾಂಟೊದಲ್ಲಿ ಉದ್ಯಮಿಯಾಗಿದ್ದಾರೆ. ಕಳೆದ ವರ್ಷ ತೆರೆಕಂಡ “ರಾಜು ಜೇಮ್ಸ್ ಬಾಂಡ್” ಚಿತ್ರದ ನಿರ್ಮಾಪಕರೂ ಆಗಿರುವ ಕಿರಣ್ ಭಾರ್ತೂರ್, ಡ್ರೀಮ್ಸ್ ಮೀಡಿಯಾ ಸಂಸ್ಥೆಯ ಮೂಲಕ ಈವರೆಗೂ 50ಕ್ಕೂ ಹೆಚ್ಚು ಕನ್ನಡ ಚಿತ್ರಗಳನ್ನು ಕೆನಡಾದಲ್ಲಿ ವಿತರಣೆ ಮಾಡಿದ್ದಾರೆ.

ಈವರೆಗೂ ಸಾಕಷ್ಟು ಕಿರುಚಿತ್ರಗಳನ್ನು ನಿರ್ದೇಶಿಸಿರುವ ಹಾಗೂ ಉದ್ಯಮಿಯೂ ಆಗಿರುವ ಕೆನಡಾ ನಿವಾಸಿ ನವೀನ್ ಕುಮಾರ್ ನಿರ್ದೇಶನದ ಮೊದಲ ಚಿತ್ರ “ಮಹಿಮಾ”. ನವೀನ್ ಕುಮಾರ್ ಅವರೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದಾರೆ.

ಟೊರೊಂಟೊದಲ್ಲಿ ನೆಲೆಸಿರುವ ಮಹಿಮಾ, ಒಂದು ರಾತ್ರಿ ತನ್ನ ಅತ್ತೆಯ ಮಗಳು ಸಾನ್ವಿಯೊಂದಿಗೆ ತೆರಳುವಾಗ ಆಕಸ್ಮಿಕವಾಗಿ ಕೆನಡಾದ ಯುವತಿಯೊಬ್ಬಳಿಗೆ ಕಾರಿನಿಂದ ಡಿಕ್ಕಿ ಹೊಡೆದು, ಸ್ಥಳದಿಂದ ಪರಾರಿಯಾಗುತ್ತಾಳೆ. ಅಪರಾಧ ಪ್ರಜ್ಞೆಯಿಂದ ಬಳಲುವ ಮಹಿಮಾಳನ್ನು, ಮೃತಪಟ್ಟ ಯುವತಿಯ ಪ್ರತೀಕಾರದ ಆತ್ಮ ಕಾಡತೊಡಗುತ್ತದೆ. ಮಹಿಮಾಳ ಕುಟುಂಬದಲ್ಲಿ ಸರಣಿ ಸಾವುಗಳು ಸಂಭವಿಸಿದಾಗ, ಡಿಟೆಕ್ಟಿವ್ ಆರ್ಯ ತನಿಖೆ ಆರಂಭಿಸುತ್ತಾನೆ. ಕೊನೆಗೆ, ಆತ್ಮದ ಹಿಂದಿರುವ ನಿಗೂಢ ಸತ್ಯವೊಂದು ಅನಾವರಣಗೊಳ್ಳುತ್ತದೆ. ಇದೇ ಚಿತ್ರದ ಪ್ರಮುಖ ಕಥಾಸಾರಾಂಶವಾಗಿದೆ. ಇಡೀ ಚಿತ್ರದ ಚಿತ್ರೀಕರಣ ಕೆನಡಾದಲ್ಲೇ ನಡೆದಿರುವುದು ವಿಶೇಷ.

ಮೂಲತಃ ದಕ್ಷಿಣ ಕನ್ನಡದವರಾದ, ಕೆನಡಾದ ಹೆಸರಾಂತ ವ್ಲಾಗರ್ ಪ್ರಜ್ಞಾ ಜೈನ್ ಅವರು “ಮಹಿಮಾ” ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಘುರಾಮ್(ಮಾಲ್ಗುಡಿಡೇಸ್), ಬಿಯೆಟಾ ನಿಕೋಲ್ ಆಮ್ರೆ, ಕಾವ್ಯಶ್ರೀ, ಪಾಲ್ ಹಾಪ್ಕಿನ್ಸ್, ಮಂಜುಳಾ ರಾಣೆ ಮುಂತಾದವರು ತಾರಾಬಳಗದಲ್ಲಿದ್ದಾರೆ.

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ, ಅಕ್ಕ ಸಮ್ಮೇಳನದಲ್ಲಿ ನಮ್ಮ ಚಿತ್ರಕ್ಕೆ ಸಿಕ್ಕ ಪ್ರಶಂಸೆಗೆ ಹಾಗೂ ಸಾವಿರಾರು ಜನರು ಪಾಲ್ಗೊಳ್ಳುವ, ಸೌತ್ ಏಷ್ಯಾದ ಎಲ್ಲಾ ಭಾಷೆಗಳ ಚಿತ್ರಗಳ ಹೆಸರಾಂತ ಟೊರಾಂಟೊ ಚಲನಚಿತ್ರೋತ್ಸವ(IFFSA Toronto)ಕ್ಕೆ ನಮ್ಮ ಚಿತ್ರ ಆಯ್ಕೆಯಾಗಿ ಪ್ರದರ್ಶನವಾಗಿರುವುದಕ್ಕೆ ತುಂಬಾ ಸಂತೋಷವಾಗಿದೆ. ಮುಂದೆ ಕೂಡ ನಮ್ಮ ಸಂಸ್ಥೆಯಿಂದ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ಮಿಸುವ ಯೋಚನೆಯಿದೆ ಎಂದು ನಿರ್ಮಾಪಕರಾದ ಕಿರಣ್ ಭಾರ್ತೂರ್, ವೀಣಾ ಭಾರ್ತೂರ್ ಹಾಗೂ ನವೀನ್ ಕುಮಾರ್ ತಿಳಿಸಿದ್ದಾರೆ.

Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.