Thursday, 24 September 2026

Hello world!

Contact Info

  • ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

  • Phone: +91 99801 79473 |

    +91 98455 00728

  • Email Us: editor@masternews365.com | advertise@masternews365.com

  • Home  
  • ಮಹಾರಾಜ ಎರಡು ಪದ ಹಾಡಿದರು
- ಕ್ರೀಡೆ | ಆಧ್ಯಾತ್ಮ | ರಾಜಕೀಯ

ಮಹಾರಾಜ ಎರಡು ಪದ ಹಾಡಿದರು

ಎಲ್ಲ ಮಹಾರಾಜ ಹಿಂಗ ಎರಡು ಪದ ಹಾಡಿದರು.ಎರಡು ಬಿಡಿಸಿ ಹೇಳಕ್ ಹತ್ತಿದ್ರು ನಾ ಹಳ್ಳೋದು ದಾರಿಯಾಗೆ ಸೈಕಲ್ಸೈಕಲ್ ಮ್ಯಾಗ ಕುಂತು ಕೇಳ್ಕೊಂತು ಒಂಟಿದೆ ಅವರು ಹಾಡ ಮುಗ್ಸಿದ್ರು ನನ್ನ ನೋಡಿದ ಕೂಡಲೇ ತಳವಡ ಹುಸೇನಪ್ಪ ಬಹಳ ಖುಷಿ ಪಟ್ಟ ಅವಾಗ ಭಜನಾದವರು ನಾಯಕನಾಗಿ ನನ್ನ ಹೆಸರು ಕೂಗಿ ಕರೆದರುಜನಪದ ಹಾಡು ಚಾಲು ಮಾಡಿದಿನ್ರಿ “ತನ್ನ ತಾನರಿತೊಡೆ ಮುಕ್ತತನ್ನ ತಾನರಿಯದೊಡೆ ಹೇಗೆ ವಿರಕ್ತ…?” ತನ್ನ ತಾನರಿತೊಡೆ ಮುಕ್ತ ಇದು ಸಪ್ಪಂಡಿ ಅವರ ಪದ.ಮುಕ್ತಿ ದೊರೆ ಬೇಕಾದರೆ ಏನು ಬೇಕು?ಅಂದ್ರೆ […]

     ಎಲ್ಲ ಮಹಾರಾಜ ಹಿಂಗ ಎರಡು ಪದ ಹಾಡಿದರು.ಎರಡು ಬಿಡಿಸಿ ಹೇಳಕ್ ಹತ್ತಿದ್ರು ನಾ ಹಳ್ಳೋದು ದಾರಿಯಾಗೆ ಸೈಕಲ್ಸೈಕಲ್ ಮ್ಯಾಗ ಕುಂತು ಕೇಳ್ಕೊಂತು ಒಂಟಿದೆ ಅವರು ಹಾಡ ಮುಗ್ಸಿದ್ರು ನನ್ನ ನೋಡಿದ ಕೂಡಲೇ ತಳವಡ ಹುಸೇನಪ್ಪ ಬಹಳ ಖುಷಿ ಪಟ್ಟ ಅವಾಗ ಭಜನಾದವರು ನಾಯಕನಾಗಿ ನನ್ನ ಹೆಸರು ಕೂಗಿ ಕರೆದರುಜನಪದ ಹಾಡು ಚಾಲು ಮಾಡಿದಿನ್ರಿ 

“ತನ್ನ ತಾನರಿತೊಡೆ ಮುಕ್ತ
ತನ್ನ ತಾನರಿಯದೊಡೆ ಹೇಗೆ ವಿರಕ್ತ…?”

ತನ್ನ ತಾನರಿತೊಡೆ ಮುಕ್ತ ಇದು ಸಪ್ಪಂಡಿ ಅವರ ಪದ.
ಮುಕ್ತಿ ದೊರೆ ಬೇಕಾದರೆ ಏನು ಬೇಕು?
ಅಂದ್ರೆ ಮೊದಲು ತನ್ನ ತಾನು ಅರಿಯಬೇಕು. ಮನುಷ್ಯ ಅಂದರೇನು ?
ಮನುಷ್ಯ ಅಂತ ಹೆಸರು ಬರಬೇಕಾದರೆ ಕಾರಣವೇನು ? ಮನುಷ್ಯ ಮಾಡುವಂತಹ ಕೆಲಸ ಏನು ?
ಮನುಷ್ಯನಾಗಿ ಹುಟ್ಟಿ ಬಂದ ಮೇಲೆ ಲಾಭ ಏನ ಪಡಕೋಬೇಕು?
ಇದನ್ನು ಅರಿತರೆ ಮಾತ್ರ ಮುಖ್ಯ ಆಗ್ತದ ಇಲ್ಲಾಂದ್ರೆ ಮುಕ್ತಿ ಸಿಗುವುದಿಲ್ಲ. ಇದು ಬರೀ ಬಾಯಿಂದ ಹೇಳೋದಲ್ಲ. ಆಚರಣೆಯಲ್ಲಿ ಬರಬೇಕು.

“ತನ್ನ ತಾನೊರಿದೊಡೆ ಮುಕ್ತ
ತನ್ನ ತಾನೇ ಅರಿಯದಿರ್ದೊಡೆ ಹೇಗೆ ವಿರಕ್ತ ?
ಮೂರು ಮಲಂಗಳ ತೊಳೆದು ಮೂವ
ತಾರು ತತ್ವಂಗಳ ಮರ್ಮವ ತಿಳಿದು
ಮೂರೈದು ಮದಗಳ ಕಳೆದು ಪೂರ್ಣ
ತಾರಕ ಬ್ರಹ್ಮದ ಪ್ರಭೇಳು ಸುಳಿದು
ತನ್ನ ತಾನರಿದೊಡೆ ಮುಕ್ತ “

ಆಣವಮಲ, ಮಾಯಾಮಲ, ಕಾರ್ಮಿಕ ಮಲ, ಇವು ಮೂರು ಮಲಗಳು ಸ್ವಚ್ಛ ಆಗಬೇಕು. 36 ತತ್ವಗಳ ಮರ್ಮ ತಿಳಿಯಬೇಕು. .
25 ಸ್ಥೂಲ ತತ್ವ
11 ಶಿವ ತತ್ವಗಳು ಕೂಡಿ ತತ್ವಗಳು ಕೂಡಿ 36 ತತ್ವಗಳು ಆಗ್ಯಾವು. ಅಂದ್ರೆ –
5 ದೈವೀ ತತ್ವ
5 ಮಿಶ್ರ ತತ್ವ
5 ಜಡ ತತ್ವ
25 ತತ್ವಗಳು : ಒಂದು ಜೀವ ಇವೆಲ್ಲ ಸೇರಿ 36 ತತ್ವಗಳು.

ದೈವೀ ತತ್ವಗಳು :
ಒಂದು ಶಿವ
ಎರಡು ಶಕ್ತಿ
ಮೂರು ಈಶ್ವರ
ನಾಲ್ಕು ಸದಾಶಿವ
ಐದು ಶುದ್ದ ವಿದ್ಯಾ

ಮಿಶ್ರ ತತ್ವಗಳು :
ಒಂದು ಕಲಾ
ಎರಡು ಕಾಲ
ಮೂರು ರಾಗ
ನಾಲ್ಕು ಅವಿದ್ಯ
ಐದು ನಿಯತಿ

ಜಡತತ್ವ :
ಆಕಾಶ ತತ್ವ : ಒಂದು ಗುಣ ಅಂದ್ರೆ ಶಬ್ದ
1, ಜ್ಞಾತೃ
2. ಮನಸ್ಸು
3. ಬುದ್ಧಿ
4. ಚಿತ್ತು
5.ಅಹಂಕಾರ

ವಾಯು ತತ್ವ :ಎರಡು ಗುಣಗಳು ಅದಾವು ಅಂದ್ರೆ ಶಬ್ದ ಮತ್ತು ಸ್ಪರ್ಶ :

  1. ಸಮಾನ ವಾಯು
  2. ವ್ಯಾನ ವಾಯು
  3. ಉದಾನ ವಾಯು
  4. ಅಪಾನವಾಯು
  5. ಪ್ರಾಣ ವಾಯು

ಅಗ್ನಿ ತತ್ವ : 3ಗುಣ ಅದಾವು ಅಂದ್ರೆ – ಶಬ್ದ ಸ್ಪರ್ಶ ರೂಪ
11. ಶ್ರೋತ್ರ
12 ನೇತ್ರ
13. ತೊಕ್ಕು
14 ರಶನಿ
15 ನಾಸಿಕ

ಜಲ ತತ್ವ : ನಾಲ್ಕು ಗುಣಗಳು ಅಂದ್ರೆ – ಶಬ್ದ ಸ್ಪರ್ಶ ರೂಪ ರಸ
16 ಶಬ್ದ
17 ಸ್ಪರ್ಶ
18 ರೂಪ
19 ರಸ
20 ಗಂಧ

ಪೃಥ್ವಿತತ್ವ :ಐದು ಗುಣ ಅದಾವು ಅಂದ್ರೆ – ಶಬ್ದ ಸ್ಪರ್ಶ ರೂಪ ರಸ ಗಂಧ
21 ವಾಕ್
22 ಪಾಣಿ
23 ಪಾದ
24 ಗುಹ್ಯ
25 ಗುದ

      36 ತತ್ವಗಳ ಮರ್ಮವನ್ನು ತಿಳಿದು ಮೂರೈದು ಮದಗಳ ಕಳೆದು, ಅಂದ್ರ ಮೂರು ತಾಪತ್ರಯಗಳು ಅದಾವ್ರಿ.. ಅವುಗಳೆಂದರೆ ಆಧ್ಯಾತ್ಮಿಕ, ಆದಿ ದೈವಿಕ , ಆದಿಭೌತಿಕ ಇವು ದೇಹದ ತಾಪತ್ರೆಗಳು. ಇನ್ನ  ಐದು ವಿಷಯಗಳು ಅದಾವು. ಶಬ್ದ, ಸ್ಪರ್ಶ, ರೂಪ, ರಸ ,ಗಂಧ , ಈ ವಿಷಯಗಳು ಕಳೆಯಬೇಕು. ಆಮೇಲೆ ಎಂಟು ಮದಗಳು ಅದಾವ್ರಿ -

ಮುಂದುವರಿಯುತ್ತದೆ ….


Leave a comment

Your email address will not be published. Required fields are marked *

ನಮ್ಮ ಬಗ್ಗೆ

ಮಾಸ್ಟರ್‌ನ್ಯೂಸ್ 365 ಸಿನಿಮಾ, ರಾಜಕೀಯ, ಕ್ರೀಡೆ, ಆಧ್ಯಾತ್ಮ, ಮನೋರಂಜನೆ ಹಾಗೂ ಸಮಕಾಲೀನ ವಿದ್ಯಮಾನಗಳ ಕುರಿತು ನಿಖರ, ತಾಜಾ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮತ್ತು ಸಾರ್ವಜನಿಕ ಮಾಹಿತಿ ವೇದಿಕೆಯಾಗಿದೆ.

Contact Us

Phone: +91 99801 79473 |

+91 98455 00728

ವಿಳಾಸ: #31 Ground Floor, 2nd Main, 3rd Cross, Near Guddanna School, Ranganathpura, Bangalore – 560079

Email Us: editor@masternews365.com | advertise@masternews365.com

Website: www.masternews365.com

ಮಾಸ್ಟರ್‌ನ್ಯೂಸ್ 365  @ 2026. All Rights Reserved.